Select Your Language

Notifications

webdunia
webdunia
webdunia
webdunia

ನಟ ರಣಬೀರ್ ಕಪೂರ್ ರಲ್ಲಿ ಸಕಾರಾತ್ಮಕ ಬದಲಾವಣೆಯಾಗಲು ಈಕೆಯೇ ಕಾರಣವಂತೆ!

ನಟ ರಣಬೀರ್ ಕಪೂರ್ ರಲ್ಲಿ ಸಕಾರಾತ್ಮಕ ಬದಲಾವಣೆಯಾಗಲು ಈಕೆಯೇ  ಕಾರಣವಂತೆ!
ಮುಂಬೈ , ಸೋಮವಾರ, 18 ಜೂನ್ 2018 (12:37 IST)
ಮುಂಬೈ : ತಮ್ಮ ಪ್ರೀತಿಯ ವಿಚಾರವನ್ನು ಎಲ್ಲೂ ಬಾಯಿ ಬಿಡದ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಈಗ ಆಲಿಯಾ ಭಟ್ ಜೊತೆಗಿನ  ತಮ್ಮ ಪ್ರೀತಿಯ ವಿಚಾರವನ್ನು  ಬಹಿರಂಗವಾಗಿ ಒಪ್ಪುಕೊಳ್ಳುವುದರ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದಾರೆ.


ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ  ತಮ್ಮ ಪ್ರೀತಿಯ ಬಗ್ಗೆ ಕೇಳಿದಾಗ ಈ ಕುರಿತು ಸದ್ಯಕ್ಕೆ ಜಾಸ್ತಿ ಮಾತು ಬೇಡ ಎಂದು ಜಾರಿಕೊಂಡಿದ್ದ ನಟ  ರಣಬೀರ್ ಕಪೂರ್ ಅವರು ಇದೀಗ ತಮ್ಮ ಪ್ರೇಯಸಿ ಆಲಿಯಾ ಭಟ್‌ ಬಗ್ಗೆ ಹೇಳಿಕೊಂಡಿದ್ದಾರೆ.
‘ಪ್ರೀತಿಯಲ್ಲಿ ಬಿದ್ದಾಗ ಪ್ರತಿಯೊಬ್ಬರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಪ್ರೀತಿ ಎಂಬುದು ನಮ್ಮ ಜೀವನದಲ್ಲಿ ಸಂಭವಿಸಿದಾಗ ನಾವು ಸಂತೋಷದಿಂದ ಇರುತ್ತೇವೆ ಎಂದು ನಾನು ನಂಬಿದ್ದೇನೆ. ಸುಂದರ ಹಾಗೂ ನಂಬಿಕೆಯ ನೆಲೆಗಟ್ಟನ್ನು ನಾವು ಪಡೆಯುತ್ತೇವೆ. ಆಲಿಯಾ ಜತೆ ಕೆಲಸ ಪ್ರಾರಂಭಿಸಿದಾಗಿನಿಂದ ನನ್ನಲ್ಲಿ ಸಕಾರಾತ್ಮಕ ಬದಲಾವಣೆಯಾಗಿದೆ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಪಡುಕೋಣೆ ತಮ್ಮ ಮನೆಬಿಟ್ಟು ಹೋಗಿದ್ಯಾಕೆ?