Select Your Language

Notifications

webdunia
webdunia
webdunia
webdunia

ಹಾಟ್ ಸ್ಪಾಟಲ್ಲಿ ಸರಣಿ ಕಳ್ಳತನ

ಹಾಟ್ ಸ್ಪಾಟಲ್ಲಿ ಸರಣಿ ಕಳ್ಳತನ
ಯಲಹಂಕ , ಶುಕ್ರವಾರ, 6 ಜುಲೈ 2018 (17:21 IST)
ಯಲಹಂಕ ಹಾಟ್ ಸ್ಪಾಟಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. ಹೃದಯ ಭಾಗದಲ್ಲಿರುವ ಮಿನಿವಿಧಾನಸೌದ ಮುಂಭಾಗದಲ್ಲಿರುವ ನಾಡ ಕಚೇರಿ ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಆಫೀಸ್ ಗಳ ಬೀಗ ಮುರಿದು ಕಳ್ಳತನ ನಡೆಸಲಾಗಿದೆ.

ಉಪ ತಹಶಿಲ್ದಾರರ, ಕಚೇರಿ ಎಲ್ಲಾ ಬಿಗಮುರಿದಿರುವ ಕತರ್ನಾಕ್ ಕಳ್ಳರು ಕೈಚಳಕ ತೋರಿದ್ದಾರೆ. ಅಂದಾಜು ಎರಡು ಲಕ್ಷಕ್ಕೂ ಹೆಚ್ಚು ನಗದು, ಕೆಲ ವಸ್ತುಗಳು ಕಳ್ಳತನ ಮಾಡಲಾಗಿದೆ.  ಚಿಲ್ಲರೆ ಅಂಗಡಿಯಿಂದ ಹತ್ತು ಸಾವಿರ ರೂ ಬೆಲೆಬಾಳುವ ಸಿಗರೇಟ್ ಎಗರಿಸಿರುವ ಕಳ್ಳರು, ದಾಖಲೆಗಳಿಗಾಗಿ ಈ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಿನಿವಿಧಾನಸೌಧ ಮತ್ತು ಕೇಂದ್ರ ಬಸ್ ನಿಲ್ದಾಣ-ಪೊಲೀಸ್ ಠಾಣೆ ಸೇರಿದಂತೆ ರೈಲ್ವೇ ನಿಲ್ದಾಣದ ಮಧ್ಯಭಾಗದಲ್ಲಿ ಇರುವ ಕಚೇರಿ ಇವು ಆಗಿವೆ. ಕತರ್ನಾಕ್ ಕಳ್ಳರ ಕೈಚಳಕಕ್ಕೆ ಬೆಚ್ಚಿ ಬಿದ್ದ ಸಾರ್ವಜನಿಕರು, ಭಯಬೀತರಾಗಿರುವ ಸಾರ್ವಜನಿಕರು.  ಸದಾ ಜನನಿಬಿಡ ಜಾಗದಲ್ಲಿನ ಕಳ್ಳತನ ಸಾರ್ವಜನಿಕರಿಗೆ ನಿದ್ದೆ ಕೆಡಿಸಿದೆ.

 





Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರ ಸಾಲ ಮನ್ನಾ ಮಾಡಿದ್ರೂ ನಿಲ್ಲದ ರೈತರ ಆತ್ಮಹತ್ಯೆ