Publish Date: Wed, 04 Jul 2018 (15:02 IST)
Updated Date: Wed, 04 Jul 2018 (15:04 IST)
ಕಾಂಗ್ರೆಸ್ ಐಟಿ ಸೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿರಾಗ್ ಪಟ್ನಾಯಕ್ ಎಂಬ ವ್ಯಕ್ತಿ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ.
ಈ ಬಗ್ಗೆ ಎಫ್.ಐ.ಆರ್. ಕೂಡ ದಾಖಲಾಗಿದ್ದು, ತಮಗಾಗುತ್ತಿರುವ ನೋವಿನ ಬಗ್ಗೆ ಮುಖ್ಯಸ್ಥೆ ರಮ್ಯಾ ಅವರಿಗೂ ದೂರು ನೀಡಿದ್ದರೂ ಕೂಡ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆ ಮಹಿಳಾ ಸಿಬ್ಬಂದಿ ದೂರಿದ್ದಾರೆ.
ಆದರೆ ಇದೀಗ ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಚಿರಾಗ್ ಅಂತಹ ವ್ಯಕ್ತಿಯಲ್ಲ. ಈ ವಿಷಯದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ತಮ್ಮ ತಂಡದ ಬಗೆಗಿನ ಆರೋಪದ ಬಗ್ಗೆ ಗೊತ್ತಾಗಿದೆ. ಆದರೆ ಸಮಿತಿಗೆ ಮೌಖಿಕವಾಗಿ, ಅಧಿಕೃತವಾಗಿ, ಅನಧಿಕೃತವಾಗಿ ಯಾವುದೇ ದೂರು ಬಂದಿಲ್ಲ.
ನಾವು ದೂರು ನೀಡಿರುವವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ವಿಷಯ ಏನು ಎಂಬುದನ್ನು ವಿವರವಾಗಿ ತಿಳಿದುಕೊಳ್ಳುತ್ತೇವೆ. ನಮ್ಮ ಬಳಿ ಕೆಲಸ ಮಾಡುವವರನ್ನು ಬೆಂಬಲಿಸುತ್ತೇವೆ. ಇದರ ಜೊತೆ ಲೈಂಗಿಕ ಕಿರುಕುಳದ ಕೇಸ್ ಪರಿಶೀಲನೆ ಮಾಡುತ್ತೇವೆ, ದೂರು ಕೊಟ್ಟ ಯುವತಿ ಅನಾರೋಗ್ಯದ ಕಾರಣ ನೀಡಿದ್ದರು, ಆದರೆ ಈ ವಿಷಯ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಪತ್ರದ ಮೂಲಕ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ