Publish Date: Wed, 04 Jul 2018 (09:10 IST)
Updated Date: Wed, 04 Jul 2018 (09:16 IST)
ಬೆಂಗಳೂರು: ನಿನ್ನೆ ಕಾಂಗ್ರೆಸ್ ಪಕ್ಷದ ವಿಧಾನಸಭೆ ಮತ್ತು ವಿಧಾನಪರಿಷತ್ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದರು.
ಆದರೆ ಔತಣಕೂಟದಲ್ಲಿ ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡಿರುವ ಶಾಸಕರು ಭಾಗವಹಿಸಲಿಲ್ಲ. ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ರೋಷನ್ ಬೇಗ್, ಕೃಷ್ಣಪ್ಪ, ಸಿಎಸ್ ಶಿವಳ್ಳಿ, ಎಚ್ ಎಂ ರೇವಣ್ಣ ಔತಣಕೂಟಕ್ಕೆ ಬಾರದೇ ಮುನಿಸು ತೋರಿದರು. ಡಿಸಿಎಂ ಪರಮೇಶ್ವರ್ ಆಗಮಿಸಿದರಾದರೂ ಬೇಗನೇ ನಿರ್ಗಮಿಸಿದರು.
ನಗರದ ಪಂಚತಾರಾ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭೂರಿ ಭೋಜನವೇ ಏರ್ಪಾಡಿಗಿತ್ತು. ಆದರೆ ಇತ್ತೀಚೆಗಷ್ಟೇ ಉಜಿರೆಯ ಶಾಂತಿವನದಲ್ಲಿ ವಿಡಿಯೋ ಲೀಕ್ ಆದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ, ಊಟ ಮಾಡಿ ಆದರೆ ಯಾರೂ ವಿಡಿಯೋ ಮಾಡಬೇಡಿ ಎಂದು ಮನವಿ ಮಾಡಿದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.