Select Your Language

Notifications

webdunia
webdunia
webdunia
webdunia

ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿದವರನ್ನು ರಕ್ಷಿಸಿದ ವೈದ್ಯನಿಗೆ ಕಾದಿತ್ತು ಬಿಗ್ ಶಾಕ್

ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿದವರನ್ನು ರಕ್ಷಿಸಿದ ವೈದ್ಯನಿಗೆ ಕಾದಿತ್ತು ಬಿಗ್ ಶಾಕ್
ಮಾಯ್ ಸಾಯ್ , ಗುರುವಾರ, 12 ಜುಲೈ 2018 (12:28 IST)
ಮಾಯ್ ಸಾಯ್ : ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಸಿಲುಕಿ ನರಳಾಡುತ್ತಿದ್ದ ಬಾಲಕರು ಸೇರಿದಂತೆ ಹದಿಮೂರು ಮಂದಿಗೆ  ವಾರಗಟ್ಟಲೆ ಚಿಕಿತ್ಸೆ ನೀಡಿ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಹೊರಗೆ ಕಳುಹಿಸಿದ  ವೈದ್ಯ ರಿಚರ್ಡ್ ಹ್ಯಾರಿಸ್ ಅವರು  ಹೊರಬರುತ್ತಲೇ ಅವರಿಗೊಂದು ಆಘಾತಕಾರಿ ಸುದ್ದಿ ಕಾದಿತ್ತು.


ಹೌದು ಜಗತ್ತಿನ ಅತ್ಯಂತ ಖ್ಯಾತ ವೈದ್ಯರ ಪೈಕಿ ಒಬ್ಬರೆನಿಸಿರುವ ಆಸ್ಟ್ರೇಲಿಯಾದ ರಿಚರ್ಡ್ ಹ್ಯಾರಿಸ್ ಅವರು ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಬಾಲಕರು ಸೇರಿದಂತೆ ಹದಿಮೂರು ಮಂದಿ ಸಿಲುಕಿ ನರಳಾಡುತ್ತಿರುವಾಗ ಅವರ ರಕ್ಷಣೆಗೆ ಹೋಗಿ ಎಂದು ಆಸ್ಟ್ರೇಲಿಯಾದ ಸರ್ಕಾರ ಸೂಚಿಸಿದಾಗ ತಕ್ಷಣ ಹೊರಟು ಅಲ್ಲಿ ನೀರಿನಲ್ಲಿ ಮುಳುಗಿ, ಅಲ್ಲಿನ ಬಂಡೆಗಲ್ಲನ್ನು ಹತ್ತಿ, ಕೆಸರಿನ ನಡುವೆ ಸಾಗಿ ಆ ಕಾರ್ಗತ್ತಲ ಗುಹೆಯೊಳಗೆ ಔಷಧ ಉಪಕರಣಗಳನ್ನು ಹೊತ್ತೊಯ್ದ ಹ್ಯಾರಿಸ್ ಅವರು, ಗುಹೆಯೊಳಗೇ ಎಲ್ಲ 12 ಮಕ್ಕಳು ಮತ್ತು ಕೋಚ್‌ಗೆ ಆರೋಗ್ಯ ಪರೀಕ್ಷೆ ಮಾಡಿದರು. ಅವರ ಈ ಸಾಹಸವನ್ನು ವಿಶ್ವವೇ ಕೊಂಡಾಡಿತ್ತು.


ಆದರೆ ಈ ರೀತಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಾಲಕರನ್ನು ರಕ್ಷಿಸಿದ್ದ ಹ್ಯಾರಿ ಹೊರಬರುತ್ತಿದ್ದಂತೆಯೇ ಕುಸಿದು ಬಿದ್ದಿದ್ದರು. ಅದಕ್ಕೆ ಕಾರಣವಾಗಿದ್ದು ಅವರ ತಂದೆಯ ಸಾವಿನ ಸುದ್ದಿ. ಥಾಯ್ಲೆಂಡ್‌ನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದ ಕೆಲವೇ ಗಂಟೆಗಳಲ್ಲಿ ಹ್ಯಾರಿ ಅವರ ತಂದೆ ನಿಧನರಾಗಿದ್ದರು. ಈ ವಿಚಾರವನ್ನು  ಹ್ಯಾರಿಸ್ ಅವರು ಕೆಲಸ ಮಾಡುವ ಸಾಸ್ ಮೆಡ್‌ಸ್ಟಾರ್ ಆರೋಗ್ಯ ಸೇವೆಯ ಮುಖ್ಯಸ್ಥ ಆಂಡ್ರೂ ಪಿಯರ್ಸ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆ ಕಲಾಪ ಒಂದು ದಿನ ವಿಸ್ತರಣೆ