ನಟಿ ಸೊನಾಲಿ ಬೇಂದ್ರೆಗೆ ಬಂದಿರುವುದು ಯಾವ ಖಾಯಿಲೆ ಗೊತ್ತೇ...?

ಗುರುವಾರ, 5 ಜುಲೈ 2018 (13:15 IST)
ಮುಂಬೈ : ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಅವರು ಕ್ಯಾನ್ಸರ್‌ ನಿಂದ ಬಳಲುತ್ತಿದ್ದು ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.


ಈ ಮಾಹಿತಿಯನ್ನು  ಸ್ವತಃ ನಟಿ ಸೊನಾಲಿ ಬೇಂದ್ರೆ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದು, ‘ನಾನು ಅಪಾಯಕಾರಿ ಪ್ರಮಾಣದ ಕ್ಯಾನ್ಸರ್‌ಗೆ ತುತ್ತಾಗಿರುವುದು ಇತ್ತೀಚೆಗೆ ಪತ್ತೆಯಾಗಿದೆ. ನಿಜಕ್ಕೂ ಇದು ಆವರಿಸಿದ್ದು ನನಗೆ ಗೊತ್ತೇ ಆಗಿರಲಿಲ್ಲ.
ಸಣ್ಣಪುಟ್ಟ ನೋವಿನ ಕಾರಣ ಕೆಲವು ಪರೀಕ್ಷೆಗೆ ಒಳಗಾಗಬೇಕಾಯಿತು. ಅದರಿಂದ ಈ ಅನಿರೀಕ್ಷಿತ ರೋಗದ ಪತ್ತೆಯಾಗಿದೆ.


ನನ್ನ ವೈದ್ಯರ ಸಲಹೆಯಂತೆ ನಾನು ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾವು ಆಶಾವಾದಿಯಾಗಿರುತ್ತೇವೆ ಮತ್ತು ದಾರಿಯ ಪ್ರತಿ ಹೆಜ್ಜೆಯಲ್ಲಿಯೂ ಹೋರಾಡಲು ನಾನು ದೃಢನಿಶ್ಚಯ ಮಾಡಿದ್ದೇನೆ. ಕಳೆದ ಕೆಲವು ದಿನಗಳಿಂದ ನನಗೆ ಸಿಗುತ್ತಿರುವ ಅಗಾಧ ಪ್ರಮಾಣದ ಪ್ರೀತಿ ನನಗೆ ಸಹಾಯ ಮಾಡುತ್ತಿದೆ. ಅದಕ್ಕೆ ನಾನು ಕೃತಜ್ಞಳಾಗಿರುತ್ತೇನೆ.


ನನ್ನ ಕುಟುಂಬ ಮತ್ತು ಸ್ನೇಹಿತರ ಬಲ ನನ್ನ ಹಿಂದಿದೆ ಎಂಬ ಅರಿವಿನೊಂದಿಗೆ ಯುದ್ಧಕ್ಕೆ ಮುನ್ನಡಿಯಿಡುತ್ತಿದ್ದೇನೆ’ ಎಂದು ಸೊನಾಲಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಿಲ್ಕಿ ಬ್ಯೂಟಿ ತಮನ್ನಾ ಫಿಟ್ ಅಂಡ್ ಪರ್ಫೆಕ್ಟ್ ಪರ್ಸನಾಲಿಟಿ ಸಿಕ್ರೇಟ್ ಇಲ್ಲಿದೆ ನೋಡಿ