ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್ ಬಾದ್ ಶಾ ಎನಿಸಿಕೊಂಡಿರುವ ಸ್ಟಾರ್ ನಟ ಶಾರುಕ್ ಖಾನ್ ಅವರು ಕೇವಲ ಉತ್ತಮ ನಟ ಮಾತ್ರ ಅಲ್ಲ ಒಳ್ಳೆಯ ಅಪ್ಪ ಕೂಡ ಹೌದು.
ಸೂಪರ್ ಸ್ಟಾರ್ ಎನಿಸಿಕೊಂಡ ಮೇಲೆ ಅವರು ಸಿನಿಮಾಗಳ ಶೂಟಿಂಗ್ ನಲ್ಲೇ ಬ್ಯೂಸಿಯಾಗಿರುವುದು ಸಹಜ. ಆದರೆ ಶಾರುಕ್ ಖಾನ್ ಅವರು ಎಷ್ಟೇ ಬ್ಯೂಸಿಯಾಗಿದ್ದರು ಕೂಡ ತಮ್ಮ ಮಕ್ಕಳಿಗಾಗಿ ಕೆಲವು ಸಮಯ ಬಿಡುವು ಮಾಡಿಕೊಂಡು ಅವರ ಜೊತೆ ಕಾಲಕಳೆಯುತ್ತಾರಂತೆ. ಯಾಕೆಂದರೆ ತನ್ನ ಮೂರು ಮಕ್ಕಳಾದ ಆರ್ಯನ್, ಸುಹಾನಾ, ಅಬರಾಮ್ ತನ್ನ ಬೆಸ್ಟ್ ಫ್ರೆಂಡ್ ಎಂದಿದ್ದಾರೆ ಶಾರುಕ್ ಖಾನ್.
ಹಾಗೇ ಅಪ್ಪನ ಬದಲು ಫ್ರೆಂಡ್ ಹಾಗೆ ವರ್ತಿಸುವ ಶಾರುಕ್ ಅವರನ್ನು ಅವರ ಮಕ್ಕಳು ಕೂಡ ಗೆಳೆಯನಂತೆ ಟ್ರೀಟ್ ಮಾಡ್ತಾರಂತೆ. ಆದರೆ ಮಕ್ಕಳ ತಪ್ಪುಗಳಿಗೆ ಶಿಕ್ಷೆ ಕೂಡ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ