Publish Date: Mon, 09 Jul 2018 (19:35 IST)
Updated Date: Mon, 09 Jul 2018 (19:37 IST)
ನವದೆಹಲಿ : ರಾಜಕೀಯ ರಣತಣತ್ರಗಳನ್ನು ರೂಪಿಸಿ ವಿರೋಧಪಕ್ಷದ ನಾಯಕರ ಬೇವರಿಳಿಸುತ್ತಿರುವ ಬಿಜೆಪಿ ಚಾಣಕ್ಯ ಎಂದೇ ಪ್ರಸಿದ್ದಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದೀಗ ರಾಷ್ಟ್ರದ ಗಣ್ಯ ವ್ಯಕ್ತಿಯೊಬ್ಬರನ್ನು ಚಾಣಕ್ಯನಿಗೆ ಹೋಲಿಸಿದ್ದಾರೆ.
ಹೌದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಕ್ಷತನವನ್ನು ಕಂಡು ಬಿಜೆಪಿ ಅಭಿಮಾನಿಗಳು ಅವರನ್ನು ಚಾಣಕ್ಯ ಎಂದು ಕರೆದರೆ ಇವರು ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಣಕ್ಯನಿಗೆ ಹೋಲಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ರಾಮಭಾವು ಮಾಲ್ಗಿ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ 12ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಿತ್ ಶಾ ಅವರು 'ಪ್ರಸ್ತುತದ ಸನ್ನಿವೇಶದಲ್ಲಿ ಆರ್ಯ ಚಾಣಕ್ಯ: ಜೀವನ ಮತ್ತು ಕೆಲಸ' ಎಂಬ ವಿಚಾರದ ಕುರಿತಾಗಿ ಉಪನ್ಯಾಸ ನೀಡಿದ್ದರು. ಆ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು ಚಾಣಕ್ಯನ ನೀತಿಗಳನ್ನೇ ಹೋಲುತ್ತವೆ ಎಂದು ವ್ಯಾಖ್ಯಾನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
pavithra
Publish Date: Mon, 09 Jul 2018 (19:35 IST)
Updated Date: Mon, 09 Jul 2018 (19:37 IST)