Select Your Language

Notifications

webdunia
webdunia
webdunia
webdunia

ಲೋಕಸಭಾ ಚುನಾವಣೆ: ಹಾರ್ದಿಕ್ ಪಟೇಲ್ ಎದುರು ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಸ್ಪರ್ಧೆ?

ಲೋಕಸಭಾ ಚುನಾವಣೆ: ಹಾರ್ದಿಕ್ ಪಟೇಲ್ ಎದುರು ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಸ್ಪರ್ಧೆ?
ನವದೆಹಲಿ , ಮಂಗಳವಾರ, 19 ಮಾರ್ಚ್ 2019 (09:33 IST)
ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬ ಗುಜರಾತ್ ನ ಜಾಮ್ನಾನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.


ರಿವಾಬರನ್ನು ಇಲ್ಲಿಂದ ಕಣಕ್ಕಿಳಿಸಿದರೆ ಅವರು ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ವಿರುದ್ಧ ಸ್ಪರ್ಧಿಸಬೇಕಾಗಬಹುದು. ಕರ್ಣಿ ಸೇನಾದ ಮಹಿಳಾ ಘಟಕದ ಮುಖ್ಯಸ್ಥೆಯೂ ಆಗಿರುವ ರಿವಾಬಗೆ ಕ್ಷತ್ರಿಯ ಸಮುದಾಯದ ಬೆಂಬಲವಿದೆ.

ಈ ಹಿನ್ನಲೆಯಲ್ಲಿ ಬಿಜೆಪಿ ರಿವಾಬಗೆ ಇಲ್ಲಿ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ. ಇಲ್ಲಿನ ಹಾಲಿ ಸಂಸದರೂ ಬಿಜೆಪಿಯವರೇ ಆಗಿರುವುದರಿಂದ ಬಿಜೆಪಿಗೆ ಮತ್ತೆ ಈ ಕ್ಷೇತ್ರವನ್ನು ಪಡೆದುಕೊಳ್ಳಲು ಪ್ರಮುಖ ಅಭ್ಯರ್ಥಿಯೊಬ್ಬರು ಬೇಕಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾಟ್ಸ್ ಆ್ಯಪ್ ಗಳನ್ನು ನೀವು ಬಳಸುತ್ತಿದ್ದರೆ ಇಂದೇ ಡಿಲೀಟ್ ಮಾಡಿ. ಕಾರಣವೇನು ಗೊತ್ತಾ?