Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಪ್ರಧಾನಿಯಾಗಿದ್ದರ ಹಿಂದಿದೆ ಮನೋಹರ್ ಪರಿಕ್ಕರ್ ಟ್ರಿಕ್! ಏನದು ಗೊತ್ತಾ?

ನರೇಂದ್ರ ಮೋದಿ ಪ್ರಧಾನಿಯಾಗಿದ್ದರ ಹಿಂದಿದೆ ಮನೋಹರ್ ಪರಿಕ್ಕರ್ ಟ್ರಿಕ್! ಏನದು ಗೊತ್ತಾ?
ನವದೆಹಲಿ , ಸೋಮವಾರ, 18 ಮಾರ್ಚ್ 2019 (10:15 IST)
ನವದೆಹಲಿ: 2014 ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರು ಘೋಷಣೆಯಾಗುವುದರ ಹಿಂದೆ ಅಸ್ತಂಗತ ಗೋವಾ ಸಿಎಂ ಮನೋಹರ್ ಪರಿಕ್ಕರ್ ಇದ್ದರು.


ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಿನ್ನೆ ನಿಧನರಾದ ಗೋವಾ ಸಿಎಂ ಪರಿಕ್ಕರ್ ಮತ್ತು ಪ್ರಧಾನಿ ಮೋದಿ ಆರ್ ಎಸ್ಎಸ್ ಹಿನ್ನಲೆಯಿಂದ ಬಂದವರು. ಇಬ್ಬರೂ ರಾಜಕೀಯವಾಗಿಯೂ ಉತ್ತಮ ಸ್ನೇಹಿತರು. ಪರಿಕ್ಕರ್ ಪ್ರಧಾನಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದಾಗ ಸರ್ಜಿಕಲ್ ಸ್ಟ್ರೈಕ್ 1 ನಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಬಹುದು.

2013 ರಲ್ಲೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಚರ್ಚೆಯಾಗುತ್ತಿದ್ದಾಗ ಅಂದು ಗುಜತಾರ್ ಸಿಎಂ ಆಗಿದ್ದ ನರೇಂದ್ರ ಮೋದಿಯವರ ಹೆಸರು ಸೂಚಿಸಿದ್ದು ಇದೇ ಪರಿಹಕ್ಕರ್ ಅವರು ಎಂಬ ಅಂಶ ಇದೀಗ ಬಯಲಾಗಿದೆ. ಇದೀಗ ಮಿತ್ರನ ಅಗಲುವಿಕೆಗೆ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸತ್ತವರಿಗಾಗಿ ಹೋಟೆಲ್ ಓಪನ್ ಮಾಡಿದ ವ್ಯಕ್ತಿ. ಕಾರಣವೇನು ಗೊತ್ತಾ?