Publish Date: Sun, 17 Mar 2019 (17:15 IST)
Updated Date: Sun, 17 Mar 2019 (17:18 IST)
ಲೋಕಸಭಾ ಚುಣಾವಣೆಯ ಸೀಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಬಿರುಸು ಪ್ರಕ್ರಿಯೆ ನಡೆಯುತ್ತಿದೆ.
ಬಿ.ಎಸ್. ಯಡಿಯೂರಪ್ಪ ಸಂಜೆ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ದೆಹಲಿಗೆ ತೆರಳಲಿರೋ ಯಡಿಯೂರಪ್ಪ, ನಡೆದ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯದಂತೆ ಹಾಗೂ ಸಭೆಯಲ್ಲಿ ಮಾಡಿರೋ ಫೈನಲ್ ಲಿಸ್ಟ್ ನೊಂದಿಗೆ ಮುಖಂಡರನ್ನು ಭೇಟಿ ಮಾಡಲಿದ್ದಾರೆ.
ಬಹುತೇಹ ಹಾಲಿ ಸಂಸದರಿಗೆ ಸೀಟ್ ಕನ್ಫರ್ಮ್ ಮಾಡಿರೋ ಬಿಜೆಪಿ ಕೋರ್ ಕಮಿಟಿ ಸಭೆ ನಡೆ ಕುತೂಹಲ ಕೆರಳಿಸಿದೆ. ಮಿಕ್ಕ ಕ್ಷೇತ್ರಗಳಿಗೆ ಪ್ರಬಲ ಅಕಾಂಕ್ಷಿಗಳಾಗಿರೋರ ಹೆಸರಿನೊಂದಿಗೆ ದೆಹಲಿಗೆ ಬಿಎಸ್ವೈ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿ ನಾಳೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿ ಪಟ್ಟಿ ಸಲ್ಲಿಕೆ ಮಾಡಲಿದ್ದಾರೆ.