Publish Date: Sat, 16 Mar 2019 (13:15 IST)
Updated Date: Sat, 16 Mar 2019 (13:16 IST)
ಬೆಂಗಳೂರು : ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಹ್ವಾನಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿ. ಕರ್ನಾಟಕ ಯಾವತ್ತೂ ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ಬೆಂಬಲ ನೀಡಿದೆ, ಇಂದಿರಾಗಾಂಧಿ ಹಾಗೂ ಸೋನಿಯಾ ಗಾಂಧಿ ವಿಚಾರದಲ್ಲಿ ಇದು ಸಾಬೀತಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದೀಗ ಈ ಟ್ವೀಟ್ ಗೆ ವ್ಯಂಗ್ಯವಾಡಿದ ಬಿಜೆಪಿ, ‘ಚುನಾವಣೆಯಲ್ಲಿ ತನ್ನ ಕ್ಷೇತ್ರವನ್ನೇ ಗೆಲ್ಲದ ವ್ಯಕ್ತಿ, ಸೋತ ಮತ್ತೊಬ್ಬ ವ್ಯಕ್ತಿಗೆ ಕಾರ್ಪೆಟ್ ಹಾಕಿ ಸ್ವಾಗತ ಕೋರುತ್ತಿದ್ದಾರೆ. ಕೋತಿ ತಾನೂ ಕೆಡೋದಲ್ದೆ ವನವನೆಲ್ಲಾ ಕೆಡಿಸಿತು ಎಂಬ ಗಾದೆ ಮಾತಿನ ಮೂಲಕ ಟ್ವೀಟರ್ ನಲ್ಲಿ ಸಿದ್ದರಾಮಯ್ಯನವರ ಕಾಲೆಳೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.