ಬೆಂಗಳೂರು : ಹಿಂದೂ ಧರ್ಮದಲ್ಲಿ ಕಣ್ಣಿಗೆ ಕಾಣಿಸುವ ಕೆಲವು ವಸ್ತುಗಳನ್ನು ಶುಭ ಅಶುಭ ಎಂದು ಹೇಳಲಾಗುತ್ತದೆ. ಅದೇರೀತಿ ಬೆಳಿಗ್ಗೆ ಎದ್ದ ತಕ್ಷಣ ಕೆಲವು ವಸ್ತುಗಳು ಕಣ್ನಿಗೆ ಬಿದ್ದರೆ ಅದು ಶುಭವಂತೆ. ಇದರಿಂದ ಆ ದಿನ ಪೂರ್ತಿ ಮಂಗಳಕರವಾಗಿರತ್ತದೆಯಂತೆ.
ಬೆಳಿಗ್ಗೆ ಮನೆ ಬಾಗಿಲು ತೆಗೆಯುತ್ತಿದ್ದಂತೆ ಕೆಂಪು ಬಟ್ಟೆ ಧರಿಸಿದ ಸುಮಂಗಲಿ ನಿಮ್ಮ ಕಣ್ಣಿಗೆ ಬಿದ್ರೆ ಆ ದಿನ ಲಾಭವಾಗಲಿದೆ ಎಂದರ್ಥ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಕಾಣುತ್ತೀರಿ ಎಂದರ್ಥ.
ಹಾಗೇ ಬೆಳಿಗ್ಗೆ ಮನೆ ಬಾಗಿಲು ತೆರೆಯುತ್ತಿದ್ದಂತೆ ಆಕಳು ಕಣ್ಣಿಗೆ ಬಿದ್ರೆ ಅದು ಕೂಡ ಮಂಗಳಕರ. ಅಲ್ಲದೇ ದನದ ಕೂಗು ಕೇಳಿದ್ರೆ, ವೇದ-ಮಂತ್ರಗಳು ಕೇಳಿದ್ರೆ, ಅಗ್ನಿಯ ದರ್ಶನವಾದ್ರೆ ಶುಭಕರ. ಒಂದು ವೇಳೆ ಕಪ್ಪು ಆಕಳು ಕಣ್ಣಿಗೆ ಬಿದ್ರೆ ಹೆಚ್ಚು ಶುಭಕರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.