Select Your Language

Notifications

webdunia
webdunia
webdunia
webdunia

ಎರಡು ಕ್ಷೇತ್ರಗಳಲ್ಲಿ ಮೋದಿ, ರಾಹುಲ್ ಸ್ಪರ್ಧೆಗೆ ಕಿಡಿ

ಎರಡು ಕ್ಷೇತ್ರಗಳಲ್ಲಿ ಮೋದಿ, ರಾಹುಲ್ ಸ್ಪರ್ಧೆಗೆ ಕಿಡಿ
ಬೆಂಗಳೂರು , ಭಾನುವಾರ, 17 ಮಾರ್ಚ್ 2019 (15:52 IST)
ಎರಡೆರಡು ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧಗಳು ವ್ಯಕ್ತವಾಗತೊಡಗಿವೆ.

ಡಬಲ್ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಟ ಪ್ರಕಾಶ್ ರಾಜ್  ವಿರೋಧಿಸಿದ್ದಾರೆ.

ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದು, ರಾಹುಲ್ ಆಗಲೀ, ಮೋದಿ ಆಗಲಿ ಯಾಕೆ ಎರಡೆರಡು ಕಡೆ ನಿಲ್ಬೇಕು?. ಜನರ ಟ್ಯಾಕ್ಸ್ ಹಣ ಯಾಕೆ ವ್ಯರ್ಥ ಮಾಡ್ತಾರೆ ಇವ್ರು. ಹಣ ಯಾರಪ್ಪನದ್ದು? ನಿಮ್ಮ ಕ್ಷೇತ್ರದಲ್ಲಿ ನಿಂತು
ಗೆಲ್ಲೋಕೆ ವಿಶ್ವಾಸ ಇಲ್ವಾ ನಿಮಗೆ? ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಹೆಸರು ಬೆಂಗಳೂರು ಕೇಂದ್ರಕ್ಕೆ ಕೇಳಿ ಬರ್ತಿದೆ. ರಾಹುಲ್ ಗಾಂಧಿ ಇಲ್ಲಿಯವರಾ? ಈ ಕ್ಷೇತ್ರ, ಇಲ್ಲಿನ‌ ಜನರ ಬಗ್ಗೆ ರಾಹುಲ್ ಗಾಂಧಿಗೆ ಗೊತ್ತಿದೆಯಾ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಯಶಸ್ಸಿಗೆ ತೇಜಸ್ವಿನಿ ಅನಂತಕುಮಾರ್- ಸುತ್ತೂರು ಶ್ರೀ ಭೇಟಿ