ಆಂಧ್ರ ಪ್ರದೇಶ : ಆಂಧ್ರ ಶಾಲೆಗಳಿಗೆ ಕೊರೊನಾ ಬಿಗ್ ಶಾಕ್ ನೀಡಿದೆ. ಶಾಲೆ ಆರಂಭಿಸಿದ ಮೂರೇ ದಿನಕ್ಕೆ ಶಿಕ್ಷಕರು ಹಾಗೂ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ.
ಆಂಧ್ರದಲ್ಲಿ 9 ಮತ್ತು 10ನೇ ತರಗತಿ ಆರಂಭಿಸಲಾಗಿತ್ತು. ನಂ.2ರಂದು ಆಂಧ್ರದಲ್ಲಿ ಶಾಲೆ ಆರಂಭಿಸಲಾಗತ್ತು. 4 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ರು. ಆದರೆ ಇದೀಗ 575 ಮಕ್ಕಳು, 829 ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದೆ.
ಹಾಗಾಗಿ ಆಂಧ್ರ ಮಾದರಿಯಂತೆ ಶಾಲೆ ಆರಂಭಿಸಲು ಮುಂದಾದ ಕರ್ನಾಟಕ್ಕೆ ಇಂದು ಎಚ್ಚರಿಕೆ ಸಂದೇಶ. ಶಾಲೆ ಆರಂಭದ ಬಗ್ಗೆ ಮತ್ತಷ್ಟು ಎಚ್ಚರಿಕೆ ಅಗತ್ಯ ಎನ್ನಲಾಗಿದೆ.