Publish Date: Tue, 03 Nov 2020 (11:10 IST)
Updated Date: Tue, 03 Nov 2020 (11:13 IST)
ಬೆಂಗಳೂರು : ಬೆಂಗಳೂರಿನ ಆರ್ ಆರ್ ನಗರ ಕ್ಷೇತ್ರದಲ್ಲಿ ಮತದಾನದ ಹಿನ್ನಲೆಯಲ್ಲಿ ಮತಗಟ್ಟೆಯ ಸಿಬ್ಬಂದಿಯ ಮೇಲೆ ಕ್ಷೇತ್ರದ ಕೊರೊನಾ ಸೋಂಕಿತ ಮತದಾರರು ಕಿಡಿಕಾರಿದ್ದಾರೆ.
ಆರ್ ಆರ್ ನಗರದಲ್ಲಿ 1200ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಮತಗಟ್ಟೆಯ ಸಿಬ್ಬಂದಿಗಳು 148 ಕೊರೊನಾ ಸೋಂಕಿತರಿಗೆ ಕರೆ ಮಾಡಿ ಮತದಾನಕ್ಕೆ ಬರುವ ಬಗ್ಗೆ ಮಾಹಿತಿ ಕೇಳಿದ್ದಾರೆ.
ಇದರಿಂದ ಸಿಬ್ಬಂದಿ ವಿರುದ್ಧ ಸೋಂಕಿತ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿ ನಾವು ಕೊರೊನಾ ಸೋಂಕಿನಿಂದ ಬಳಲುತ್ತಿದ್ದೇವೆ. ನಿಮಗೆ ಮತದಾನವೇ ಮುಖ್ಯವಾಯಿತಾ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.