Publish Date: Thu, 30 Aug 2018 (09:31 IST)
Updated Date: Thu, 30 Aug 2018 (09:36 IST)
ಸೇಲಂ: ಕೆಲವೊಮ್ಮೆ ಎಂತೆಂತಹಾ ವಿಚಿತ್ರಗಳು ನಡೆಯುತ್ತವೆ ನೋಡಿ..! ಇಲಿ ಕಚ್ಚಿದ್ದಕ್ಕೆ ಗ್ರಾಹಕ ವೇದಿಕೆಯೊಂದು ದುಬಾರಿ ಮೊತ್ತದ ಪರಿಹಾರ ನೀಡುವಂತೆ ರೈಲ್ವೇಗೆ ಆದೇಶಿಸಿದೆ.
ಇದು ನಡೆದಿರುವುದು ತಮಿಳುನಾಡಿನಲ್ಲಿ. ರೈಲಿನಲ್ಲಿ ಇಲಿ ಕಚ್ಚಿ ಆದ ಮಾನಸಿಕ ಕಿರಿ ಕಿರಿ ಮತ್ತು ಗಾಯಕ್ಕೆ ಪರಿಹಾರ ನೀಡುವಂತೆ ವೆಂಕಟಾಚಲಂ ಎಂಬವರು ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.
ಇದರ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಇಲಿ ಕಚ್ಚಿದ ವ್ಯಕ್ತಿಗೆ ಪರಿಹಾರ ರೂಪವಾಗಿ 25 ಸಾವಿರ ರೂ. ಮತ್ತು ವೈದ್ಯಕೀಯ ಚಿಕಿತ್ಸೆಗೆ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಆದೇಶಿಸಿದೆ. ಈಗಾಗಲೇ ವೆಂಕಟಾಚಲಂ ವೈದ್ಯಕೀಯ ಚಿಕಿತ್ಸೆಗೆ 5000 ರೂ. ಖರ್ಚು ಮಾಡಿದ್ದು, ಅದನ್ನು ಭರಿಸಲೂ ವೇದಿಕೆ ಆದೇಶಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.