Select Your Language

Notifications

webdunia
webdunia
webdunia
webdunia

ನಟಿ ಇಲಿಯಾನ ಈಗ ಈ ಟೂರಿಸ್ಟ್ ಪ್ಲೇಸ್ ನ ಬ್ರ್ಯಾಂಡ್ ಅಂಬಾಸಿಡರ್

ನಟಿ ಇಲಿಯಾನ ಈಗ ಈ ಟೂರಿಸ್ಟ್ ಪ್ಲೇಸ್ ನ ಬ್ರ್ಯಾಂಡ್ ಅಂಬಾಸಿಡರ್
ಮುಂಬೈ , ಭಾನುವಾರ, 25 ಮಾರ್ಚ್ 2018 (06:38 IST)
ಮುಂಬೈ : ಕೆಲವು ಕಂಪೆನಿಗಳು ತಮ್ಮ ಬ್ಯುಸಿನೆಸ್ ಅನ್ನು ಇಂಪ್ರೂವ್ ಮಾಡಿಕೊಳ್ಳಲು ಸಿನಿಮಾ ರಂಗದ ಸ್ಟಾರ್ ನಟ ನಟಿಯರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಮಾಡಿಕೊಳ್ಳುತ್ತಾರೆ. ಅದೇರೀತಿ ಇದೀಗ ‘ಫಿಜಿ’ ಪ್ರವಾಸೋದ್ಯಮ ಇಲಾಖೆ ಭಾರತದ ಚಲುವೆ, ಬಾಲಿವುಡ್ ನಟಿಯೊಬ್ಬರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಮಾಡಿಕೊಂಡಿದ್ದಾರಂತೆ.


ಹೌದು ಆ ಚೆಲುವೆ ಬೇರೆ ಯಾರು ಅಲ್ಲ. ಬಾಲಿವುಡ್ ನಟಿ ಇಲಿಯಾನ ಡಿ ಕ್ರೂಝ್. ಇವರು 'ಫಿಜಿ' ಅನ್ನೋ ದೇಶದ ಪ್ರವಾಸೋದ್ಯಮದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಭಾರತ ದೇಶಕ್ಕೂ ಹಾಗು ಫಿಜಿ ದೇಶಕ್ಕೂ ಪ್ರವಾಸೋದ್ಯಮದ ವಿಷಯದಲ್ಲಿ ಬಾರೀ ನಂಟಿರುವ ಕಾರಣದಿಂದ ಇಲಿಯಾನ ಅವರನ್ನು  ರಾಯಭಾರಿಯಾಗಿ ಆಯ್ಕೆ ಮಾಡಿದ್ದೇವೆಂದು ಅಲ್ಲಿನ ಸರ್ಕಾರ ತಿಳಿಸಿದೆ.ಇದರಿಂದ  ಎರಡೂ ದೇಶಗಳಿಗೂ ಈ ವಿಷಯದಲ್ಲಿ ಲಾಭವಾಗಬಹುದೆಂಬುದು ಹೋಟೆಲ್ ಉದ್ಯಮಿಗಳ ಲೆಕ್ಕಾಚಾರವಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅರ್ಜುನ್ ದೇವ್ ಮೇಲೆ ಕೊಲೆಯ ಸಂಚು !