Select Your Language

Notifications

webdunia
webdunia
webdunia
webdunia

ವಾಟರ್ ಬಾಟಲ್ ಗೆ ಇಲಿ ಕಟ್ಟಿಹಾಕಿ ಚಿತ್ರಹಿಂಸೆ

Torture
ಇಲಿಯೊಂದನ್ನು ಖಾಲಿ ವಾಟರ್ ಬಾಟಲ್ ಗೆ ಕಟ್ಟಿಹಾಕಿ ಅಮಾನುಷವಾಗಿ ಚಿತ್ರಹಿಂಸೆ ನೀಡಿರುವ ವೀಡಿಯೋ ಒಂದು‌ ವೈರಲ್ ಆಗಿದೆ.
 
ಮಂಡ್ಯದಲ್ಲಿ ಇಲಿಯೊಂದನ್ನು ವಾಟರ್ ಬಾಟಲ್ ಗೆ ದಾರದಿಂದ ಕಟ್ಟಿ ಹಾಕಿ ಅದಕ್ಕೆ ಕೋಲಿನಲ್ಲಿ ಒಡೆಯೋ ಮೂಲಕ ಚಿತ್ರಹಿಂಸೆ ನೀಡಿದ್ದಾರೆ ದುರುಳರು. ಮೂಕ ಪ್ರಾಣಿ ಎಂಬುದನ್ನು ಕಾಣದೇ ಅದಕ್ಕೆ ಮನಬಂದಂತೆ ಥಳಿಸಿದ್ದಾರೆ.

ಇಲಿಗಳು ಸಾಮಾನ್ಯವಾಗಿ ಮನೆಗಳಲ್ಲಿ ಬಿಲ ಅಥವಾ ಅಕ್ಕಿ ಮೂಟೆಗಳಲ್ಲಿ‌ ಅಡಗಿ ಮನೆ ಸಾಮಾಗ್ರಿಗಳನ್ನು ತಿನ್ನುತ್ತವೆ.‌ ಆದರೆ ಅವುಗಳನ್ನು ಬೋನ್ ಅಥವಾ ಇಲಿ ಔಷಧಿ ಸಿಂಪಡಿಸಿ ಕೊಲ್ಲಲಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಇಲಿಯೊಂದನ್ನು ಹಿಡಿದು ಅದನ್ನು ಕಟ್ಟಿಹಾಕಿ ಮನಬಂದಂತೆ ಥಳಿಸಿ ಅದನ್ನು ವೀಡಿಯೋ ಮಾಡಿ ಫೇಸ್ ಬುಕ್, ವಾಟ್ಸಾಪ್ ಗೆ ಅಪ್ ಲೋಡ್ ಮಾಡಿದ್ದು, ಇದು ಪ್ರಾಣಿಪ್ರಿಯರ ಆಕ್ರೋಶಕ್ಕೂ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಗಂಗಾ ಮಠದಲ್ಲಿ 20 ಲಕ್ಷ ಮೌಲ್ಯದ ನೋಟು ಪುಸ್ತಕ ಉಚಿತವಾಗಿ ವಿತರಿಸಿದ ಭಕ್ತ