Select Your Language

Notifications

webdunia
webdunia
webdunia
webdunia

ಸಿದ್ಧಗಂಗಾ ಮಠದಲ್ಲಿ 20 ಲಕ್ಷ ಮೌಲ್ಯದ ನೋಟು ಪುಸ್ತಕ ಉಚಿತವಾಗಿ ವಿತರಿಸಿದ ಭಕ್ತ

ಸಿದ್ಧಗಂಗಾ ಮಠದಲ್ಲಿ 20 ಲಕ್ಷ ಮೌಲ್ಯದ ನೋಟು ಪುಸ್ತಕ ಉಚಿತವಾಗಿ ವಿತರಿಸಿದ ಭಕ್ತ
ತುಮಕೂರು , ಭಾನುವಾರ, 1 ಜುಲೈ 2018 (20:47 IST)
ಸಿದ್ದಗಂಗಮಠ ಅನ್ನದಾಸೋಹ, ವಿದ್ಯಾದಾಸೋಹದ ಕಣಜ ಅಲ್ಲಿನ ಮಕ್ಕಳ ಬದುಕಿಗೆ ನೆರವಾದ್ರೆ ಸಾರ್ಥಕ ಅನ್ನೋ ಮನೋಭಾವ ಅನೇಕರದ್ದು. ಶತಾಯುಶಿ ಸಮಾಜ ಸೇವಾ ಕೈಂಕಾರ್ಯಕ್ಕೆ ನಮ್ಮದೊಂದು ನೆರವಿನ‌ ಹಸ್ತ ಇರ್ಲಿ ಅನ್ನೋ ಮನೋಭಾವ ಅನೇಕರದ್ದು. ಆ ಸಾಲಿನಲ್ಲಿ ರಾಜಕುಮಾರ ಅವರ ಕುಟುಂಬ ಕೂಡ ಒಂದು. 
 
ಮಠದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಉಚಿತವಾಗಿ 20 ಲಕ್ಷ ಮೌಲ್ಯದ 12 ಸಾವಿರ ನೋಟು ಪುಸ್ತಕವನ್ನ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗಶ್ರೀಗಳಿಂದ ನೀಡುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಿದರು. ಮೂಲತಃ ಬೆಂಗಳೂರಿನವರಾದ ರಾಜಕುಮಾರ ಕುಟುಂಬ ಕಳೆದ ಹದಿಮೂರು ವರ್ಷಗಳಿಂದ ಈ ಕೆಲಸವನ್ನ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
 
ಖಾಸಗಿ ಕಂಪೆನಿ ಮಾಲೀಕರಾಗಿರುವ ಇವರು ಕುಟುಂಬ ಸಮೇತ ಮಠಕ್ಕೆ ಆಗಮಿಸಿ ಪ್ರತಿವರ್ಷ ಶೈಕ್ಷಣಿಕ ಅವಧಿ ಆರಂಭದ ವೇಳೆ ಈ ಸೇವೆ ಮಾಡುತ್ತಾರೆ. ಆ ಮೂಲಕ ಮಕ್ಕಳ ಶೈಕ್ಷಣಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹ ಲಕ್ಷಾಂತರ ಜನರ ಉದಾರತೆಯಿಂದಲೇ ಮಠದಲ್ಲಿ ಸೇವೆ ನಿರಂತರವಾಗಿ ಮುಂದುವರಿಯುತ್ತಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಜಾತಿ ರಾಜಕಾರಣದಿಂದ ಸರಕಾರ ನಡೆಯೋಲ್ಲ ಎಂದ ಸಚಿವ