Publish Date: Tue, 26 Jun 2018 (18:32 IST)
Updated Date: Tue, 26 Jun 2018 (18:38 IST)
ಶಾಲೆಗೆ ಅಕ್ಷರ ಕಲಿಯುವುದಕ್ಕೆ ಎಂದು ಮಕ್ಕಳು ತೆರಳುತ್ತಾರೆ. ಆದರೆ ಪಾಠ ಕೇಳಲು ಹೋದ ಮಕ್ಕಳನ್ನು ಕೂಲಿಗಳ ಥರ ಕೆಲಸ ಮಾಡಿಸಿಕೊಂಡ ಘಟನೆ ನಡೆದಿದೆ.
ಶಾಲೆಯ ಆಡಳಿತ ಮಂಡಳಿಯ ಕ್ರಮಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳಿಂದ ಅಕ್ಕಿ ಮೂಟೆಗಳನ್ನು ತರಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ದಾವಣಗೆರೆ ನಗರದ ನಿಟ್ಟುವಲ್ಲಿ ಆದರ್ಶ ಶಾಲಾ ವಿದ್ಯಾರ್ಥಿಗಳಿಂದ ಅಕ್ಕಿ ಮೂಟೆಗಳನ್ನು ಆಡಳಿತ ಮಂಡಳಿ ತರಿಸಿಕೊಂಡಿದೆ. ವಿದ್ಯಾರ್ಥಿಗಳು ಸೈಕಲ್ ಮೇಲೆ ಅಕ್ಕಿ ಮೂಟೆಗಳನ್ನು ಸಾಗಿಸುತ್ತಿರುವಾಗ ತೆಗೆದ ವಿಡಿಯೋ ವೈರಲ್ ಆಗುತ್ತಿದ್ದು, ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಲೆಯ ಮುಖ್ಯ ಗುರುಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು, ಪಾಲಕರು ಆಗ್ರಹಿಸಿದ್ದಾರೆ.