Select Your Language

Notifications

webdunia
webdunia
webdunia
webdunia

ಶಾಲೆಯಲ್ಲಿ ಪೋಷಕರ ಕಲ್ಲು ತೂರಾಟ - ವೈರಲ್ ವೀಡಿಯೋ

ಶಾಲೆಯಲ್ಲಿ ಪೋಷಕರ ಕಲ್ಲು ತೂರಾಟ - ವೈರಲ್ ವೀಡಿಯೋ

ಅತಿಥಾ

ಅಂಕೋಲಾ , ಶುಕ್ರವಾರ, 23 ಫೆಬ್ರವರಿ 2018 (19:52 IST)
ಅಂಕೋಲಾ ತಾಲ್ಲೂಕಿನ ಹಾರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪೋಷಕರು ಗುರುವಾರ ಪರಸ್ಪರ ಚಪ್ಪಲಿ, ಕಲ್ಲುಗಳಿಂದ ಹೊಡೆದುಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ಹಾರವಾಡದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಇದನ್ನೇ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ತಾಯಿ ಸುರೇಖಾ ಹಾಗೂ ಆತನ ಅಜ್ಜಿ ಮತ್ತೊಬ್ಬ ವಿದ್ಯಾರ್ಥಿಗೆ ಶಾಲಾ ಆವರಣದಲ್ಲೇ ಚಪ್ಪಲಿಯಿಂದ ಹೊಡೆದಿದ್ದರು. ಈ ವಿಚಾರವಾಗಿ ಗ್ರಾಮದ ಮುಖಂಡರು, ಹೊಡೆತ ತಿಂದ ವಿದ್ಯಾರ್ಥಿ ಹಾಗೂ ಅವನ ತಾಯಿ ಕಾಂಚನಾ ಅವರೊಂದಿಗೆ ಶಾಲೆಗೆ ತೆರಳಿ ಘಟನೆ ಕುರಿತು ಶಿಕ್ಷಕರನ್ನು ಪ್ರಶ್ನಿಸಿದರು. ಈ ಬಗ್ಗೆ ಚರ್ಚಿಸಲು ಶಾಲಾಭಿವೃದ್ಧಿ ಸಮಿತಿಯು ಗುರುವಾರ ಬೆಳಿಗ್ಗೆ ಪೋಷಕರ ಸಭೆ ಕರೆದಿತ್ತು. 
 
ಇದನ್ನು ತಿಳಿದ ಸುರೇಖಾ ಚೀಲದಲ್ಲಿ ಕಲ್ಲು ತುಂಬಿಕೊಂಡು ಸಭೆಗೆ ಬಂದಿದ್ದರು. ಬಳಿಕ ಸಭೆಯಲ್ಲಿ ಮಹಿಳೆಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಸುರೇಖಾ ಕಲ್ಲು ತೂರಲು ಆರಂಭಿಸಿದ್ದರು. ಅವರೊಂದಿಗಿದ್ದ ಅಜ್ಜಿಯೂ ಜಗಳಕ್ಕಿಳಿದರು. ಬಳಿಕ ರೊಚ್ಚಿಗೆದ್ದ ಗ್ರಾಮದ ಇತರ ಮಹಿಳೆಯರು ಕಲ್ಲು ತೂರುತ್ತಿದ್ದ ಮಹಿಳೆಯನ್ನು ಅಟ್ಟಾಡಿಸಿ ಹೊಡೆದಿದ್ದಾರೆ.
 
ಗಲಾಟೆ ನಡೆದ ಸ್ಥಳಕ್ಕೆ ಬಂದ ಪೋಲೀಸರು ಪೋಷಕರನ್ನು ಸಮಧಾನಪಡಿಸಿ ಒಂದುಗೂಡಿಸಿದ್ದಾರೆ. ಗಲಾಟೆ ನಡೆಸಿದ ಮಹಿಳೆಯಿಂದ ಮುಚ್ಚಳಿಕೆಯನ್ನು ಪೊಲೀಸರು ಬರೆಸಿಕೊಂಡಿದ್ದಾರೆ.
 
ಇನ್ನು ಮಹಿಳೆಯರ ಕಲ್ಲು ತೂರಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಹಾನರ್‌...!