ಗೋವಾ ಕಾರಿಗೆ ಅಟ್ಟಾಡಿಸಿ ಕಲ್ಲು ಹೊಡೆದ ಹೋರಾಟಗಾರರು!

ಗುರುವಾರ, 25 ಜನವರಿ 2018 (09:59 IST)
ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹೋರಾಟಗಾರರ ಕಿಚ್ಚು ಗೋವಾ ಕಡೆಗೆ ತಿರುಗಿದೆ. ನೀರು ಕೊಡಲು ನಿರಾಕರಿಸುತ್ತಿರುವ ಗೋವಾ ಸರ್ಕಾರದ ಮೇಲಿನ ಸಿಟ್ಟಿಗೆ ಗೋವಾ ಮೂಲದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
 

ಬೆಳಗಾವಿ ಗಡಿಯಲ್ಲಿ ಈ ಘಟನೆ ನಡೆದಿದೆ. ಗೋವಾ ರಿಜಿಸ್ಟ್ರೇಷನ್ ನಂಬರ್ ನ ಕಾರು ಕಾಣುತ್ತಿದ್ದಂತೆ ಪ್ರತಿಭಟನಾಕಾರರ ಕಿಚ್ಚು ಕೆರಳಿಸಿದೆ. ಹಠಾತ್ ಕಾರಿನ ಮೇಲೆ ಹೋರಾಟಗಾರರು ಕಲ್ಲು ತೂರಾಟ ನಡೆಸಿದ್ದಾರೆ.

ಘಟನೆಯಿಂದ ಗಾಬರಿಯಾದ ಚಾಲಕ ಕಾರು ಸಮೇತ ಪರಾರಿಯಾಗಲು ನೋಡಿದಾಗ ಹೋರಟಗಾರರು ಅಟ್ಟಾಡಿಸಿಕೊಂಡು ಹೋಗಿ ಕಲ್ಲೆಸಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ವ್ಯಾಪಾರಿ ಪಕ್ಷ- ರಾಯರೆಡ್ಡಿ ಟೀಕೆ