Publish Date: Thu, 25 Jan 2018 (09:01 IST)
Updated Date: Thu, 25 Jan 2018 (09:02 IST)
ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರಿಗೆ ಬರುವ ಸಮಯದಲ್ಲೇ ಬಂದ್ ಗೆ ಕರೆ ಕೊಟ್ಟಿರುವುದರ ಹಿಂದೆ ಕಾಂಗ್ರೆಸ್ ಕುತಂತ್ರವಿದೆ ಎಂದು ಆರೋಪಿಸಿರುವ ಬಿಜೆಪಿ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವಾಗ ಜಿಲ್ಲೆ ಜಿಲ್ಲೆಯಲ್ಲೂ ಬಂದ್ ನಡೆಸುವುದಾಗಿ ಕಿಡಿ ಕಾರಿದೆ.
ರಾಹುಲ್ ರಾಜ್ಯ ಪ್ರವಾಸ ಮಾಡುವಾಗ ಯಾವ ಜಿಲ್ಲೆಗೆ ಭೇಟಿ ನೀಡುತ್ತಾರೋ ಆ ಸಂದರ್ಭದಲ್ಲಿ ಬಿಜೆಪಿ ಆ ಜಿಲ್ಲೆಯಲ್ಲಿ ಬಂದ್ ಘೋಷಣೆ ಮಾಡಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಇದರೊಂದಿಗೆ ಇದೀಗ ಕರ್ನಾಟಕ ಬಂದ್ ವಿಷಯ ರಾಜಕೀಯ ದಾಳವಾಗಿದೆ. ನಿಜವಾದ ಸಮಸ್ಯೆ ಮಹದಾಯಿ ವಿವಾದಕ್ಕೆ ಪರಿಹಾರ ಒದಗಿಸುವುದು ಬಿಟ್ಟು ರಾಜಕೀಯ ವಿಷಯಕ್ಕೆ ವೇದಿಕೆಯಾಗುತ್ತಿರುವುದು ವಿಪರ್ಯಾಸ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ