Publish Date: Thu, 25 Jan 2018 (08:04 IST)
Updated Date: Thu, 25 Jan 2018 (08:06 IST)
ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಮತ್ತೆ ರಾಜಕೀಯ ನಾಯಕರ ವಿರುದ್ಧ ಚಾಟಿ ಬೀಸಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರ ವಿರುದ್ಧ ಕಿಡಿ ಕಾರಿದ್ದಾರೆ.
ಇತ್ತೀಚೆಗಷ್ಟೇ ಸಚಿವ ರಮಾನಾಥ್ ರೈ ಬಂಟ್ವಾಳದಲ್ಲಿ ಮುಸ್ಲಿಮರ ಓಟಿನಿಂದ ಗೆದ್ದೆ ಎಂದು ವಿವಾದ ಸೃಷ್ಟಿಸಿದ್ದರು. ಅದಕ್ಕೆ ಪ್ರತಿಯಾಗಿ ಬಿಜೆಪಿಯವರು ಮುಂದಿನ ಚುನಾವಣೆ ಅಲ್ಲಾಹ್ ಮತ್ತು ರಾಮನ ನಡುವೆ ಎಂದಿದ್ದನ್ನು ಪ್ರಸ್ತಾಪಿಸಿ ಪ್ರಕಾಶ್ ರೈ ಕಿಡಿ ಕಾರಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಒಬ್ಬ ನಾಯಕ ಅಲ್ಲಾಹ್ ನ ಕೃಪೆಯಿಂದ ಗೆದ್ದೆ ಎನ್ನುತ್ತಾರೆ. ಇನ್ನೊಬ್ಬ ಬಿಜೆಪಿ ನಾಯಕರು ಮುಂದಿನ ಚುನಾವಣೆ ಅಲ್ಲಾಹ್ ಮತ್ತು ರಾಮನ ನಡುವೆ ಎನ್ನುತ್ತಾರೆ. ದಯವಿಟ್ಟು ಇಬ್ಬರೂ ನಾಯಕರು ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಬಿಟ್ಟು ನಿಜವಾದ ಸಮಸ್ಯೆಗಳತ್ತ, ಅಭಿವೃದ್ದಿಯತ್ತ ಗಮನ ಹರಿಸುತ್ತಾರಾ?’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ