Publish Date: Thu, 25 Jan 2018 (09:35 IST)
Updated Date: Thu, 25 Jan 2018 (09:37 IST)
ಬೆಂಗಳೂರು: ಬಿಜೆಪಿ ಇಂದು ಮೈಸೂರಿನಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಸಲುದ್ದೇಶಿಸಿದ್ದ ಪರಿವರ್ತನಾ ರ್ಯಾಲಿಗೆ ತಡೆ ಒಡ್ಡುವ ಉದ್ದೇಶದಿಂದಲೇ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂಬ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಒಂದು ವೇಳೆ ಬಿಜೆಪಿಗೆ ನಿಜವಾಗಿ ರಾಜ್ಯದ ಜನತೆ, ಜಲ, ಜನ ಜೀವನದ ಬಗ್ಗೆ ಕಾಳಜಿಯಿದ್ದರೆ ಪರಿವರ್ತನಾ ರ್ಯಾಲಿಯನ್ನು ಎರಡು ದಿನ ಮುಂದೆ ಹಾಕಿ ಹೋರಾಟಕ್ಕೆ ಬೆಂಬಲ ನೀಡಲಿ. ಅದು ಬಿಟ್ಟು ಬಂದ್ ಮಾಡಿದ್ದಕ್ಕೆ ಕಾಂಗ್ರೆಸ್ ಕಾರಣ ಎಂದು ದೂರುವುದು ಏಕೆ? ನೀವೂ ಈ ರಾಜ್ಯಕ್ಕೆ ಸೇರಿದವರಲ್ಲವೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕುಮ್ಮಕ್ಕಿನಲ್ಲೇ ಬಂದ್ ನಡೆಯುತ್ತಿದೆ ಎಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ ಬಿಜೆಪಿ ಯಾಕೆ ಮಹದಾಯಿ ಹೋರಾಟಕ್ಕೆ ಕೈ ಜೋಡಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ