Publish Date: Thu, 25 Jan 2018 (09:25 IST)
Updated Date: Thu, 25 Jan 2018 (09:27 IST)
ಬೆಂಗಳೂರು: ಕರ್ನಾಟಕ ಬಂದ್ ನ ಇಫೆಕ್ಟ್ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ರಾಜಧಾನಿ ಬೆಂಗಳೂರಿಗೆ ಬೆಳ್ಳಂ ಬೆಳಿಗ್ಗೇ ಬೇರೆ ಊರುಗಳಿಂದ ಬಂದ ಜನ ಊಟ ತಿಂಡಿಗೂ ಕಷ್ಟಪಡುವಂತಾಗಿದೆ.
ಬೆಳಗ್ಗಿನ ಜಾವ ಕೆಲ ಹೋಟೆಲ್ ಗಳು ತೆರೆದಿದ್ದರೂ ನಂತರ ಒಂದೊಂದಾಗಿ ಮುಚ್ಚಿದ್ದು, ಇದೀಗ ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದಾಗಿ ತಿನ್ನಲು ಇಲ್ಲದೇ ಜನ ಪರದಾಡುವಂತಾಗಿದೆ.
ಅತ್ತ ತಲುಪಬೇಕಾದ ಸ್ಥಳಕ್ಕೆ ಸಾಗಲು ಬಸ್ ಸೌಕರ್ಯವೂ ಇಲ್ಲ, ಹೊಟ್ಟೆಗೂ ಇಲ್ಲದೇ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. ಕೆಲವು ಆಟೋ ಸಂಚರಿಸುತ್ತಿದ್ದರೂ ದುಬಾರಿ ಬೆಲೆ ಕೇಳುತ್ತಿರುವುದರಿಂದ ಶ್ರೀ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ