ಕಲ್ಲು ತೂರಾಟ ನಡೆಸಿದ ವಾಟಾಳ್ ಬೆಂಬಲಿಗರಿಗೆ ಸಾರ್ವಜನರಿಕರಿಂದಲೇ ತರಾಟೆ!

ಗುರುವಾರ, 25 ಜನವರಿ 2018 (09:42 IST)
ಬೆಂಗಳೂರು: ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ದುಷ್ಕೃತ್ಯಕ್ಕೆ ತೊಡಗಿಸಿಕೊಂಡಿದ್ದು ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲಿಗರು ಮಲ್ಲೇಶ್ವರದಲ್ಲಿ ಕಿಡಿಗೇಡಿ ಕೃತ್ಯ ನಡೆಸಿದ ವರದಿಯಾಗಿದೆ.
 

ಮಲ್ಲೇಶ್ವರಂ 18 ನೇ ಕ್ರಾಸ್ ನಲ್ಲಿ ಹೋಟೆಲ್, ಅಂಗಡಿಗಳ ಮೇಲೆ ಇದ್ದಕ್ಕಿದ್ದಂತೇ ಕಲ್ಲು ತೂರಾಟ ನಡೆಸಿ ವಾಟಾಳ್ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಇದರ ವಿರುದ್ಧ ಸ್ಥಳೀಯರೇ ತಿರುಗಿಬಿದ್ದಿದ್ದಾರೆ.

ಈ ರೀತಿ ನಮ್ಮ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದರೆ ನಮ್ಮ ಹೊಟ್ಟೆ ಪಾಡಿಗೆ ತೊಂದರೆಯಾಗುವುದಷ್ಟೇ ಹೊರತು ಸರ್ಕಾರಗಳಿಗೆ ಸಮಸ್ಯೆ ಅರ್ಥವಾಗುವುದಿಲ್ಲ. ಇದನ್ನು ನೋಡಿದರೆ ನೀವು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲಿಸುವ ಕೆಲಸ ಮಾಡುತ್ತಿದ್ದೀರಿ ಎಂದುಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯರೇ ಕಿಡಿಗೇಡಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಾಟಾಳ್ ಹಿಂಬಾಲಕರಿಂದ ಕಲ್ಲು ತೂರಾಟ