Select Your Language

Notifications

webdunia
webdunia
webdunia
webdunia

ಅಪಾರ್ಟ್‌ಮೆಂಟ್‌ನಿಂದ ಬಿದ್ದು 4 ವರ್ಷದ ಬಾಲಕಿ ಸಾವು...!!!

ಅಪಾರ್ಟ್‌ಮೆಂಟ್
ನಾಲ್ಕು ವರ್ಷದ ಬಾಲಕಿಯೊಬ್ಬಳು ಅಪಾರ್ಟ್‌ಮೆಂಟ್‌ನ 10 ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಪ್ರದೇಶ ರಾಜ್ಯದ ಘಾಜಿಯಾಬಾದ್‌ನಲ್ಲಿರುವ ಇಂದಿರಾಪುರಂ ರೆಸಿಡೆನ್ಸಿಯಲ್ ಸೊಸೈಟಿ ವಲಯದಲ್ಲಿ ನಡೆದಿದೆ.

ಮೃತಪಟ್ಟಿರುವ ಬಾಲಕಿಯ ಹೆಸರು ಮೈರಾ ಸಚಿದೇವ್ ಆಗಿದ್ದು, ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಘಟನೆ ಸಂಭವಿಸಿದ ತತ್‌ಕ್ಷಣ ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಸ್ಪತ್ರೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
 
ಮನಿಷ್ ಸಚಿದೇವಾ ಈ ಬಾಲಕಿಯ ತಂದೆಯಾಗಿದ್ದು ಈತ ತನ್ನ ಕುಟುಂಬದವರೊಡನೆ ಜೈಪುರಿಯಾ ಸನ್‌ರೈಸ್ ಗ್ರೀನ್ಸ್ ಅಪಾರ್ಟಮೆಂಟ್‌ನ 10 ನೇ ಮಹಡಿಯಲ್ಲಿರುವ ಪ್ಲಾಟ್ ಸಂಖ್ಯೆ 1002 ರಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈ ಘಟನೆ ನಡೆದ ವೇಳೆ ಆ ಮಗುವಿನ ತಾಯಿ ತನ್ನ ಹಿರಿಯ ಮಗಳನ್ನು ಟ್ಯೂಶನ್ ಕ್ಲಾಸ್‌ನಿಂದ ಕರೆತರಲು ಹೊರ ಹೋಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
webdunia
ಅಷ್ಟೇ ಅಲ್ಲ ಮನೆಯ ಬಾಲ್ಕನಿಯಲ್ಲಿದ್ದ ಸ್ಟೂಲ್ ಈ ದುರಂತಕ್ಕೆ ಮುಖ್ಯ ಕಾರಣವಾಗಿದ್ದು, ಆಟವಾಡುತ್ತಾ ಬಾಲ್ಕನಿಗೆ ತೆರಳಿದ ಬಾಲಕಿ, ಆ ಸ್ಟೂಲನ್ನು ಹತ್ತಿ ಕೆಳಕ್ಕೆ ಬಗ್ಗಿದಾಗ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ ಎಂದು ಹೇಳಲಾಗುತ್ತಿದೆ.
 
ಪೋಷಕರ ನಿರ್ಲಕ್ಷತೆಯೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದ್ದು ಈ ಕುರಿತಂತೆ ಹುಡುಗಿಯ ಪೋಷಕರು ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲ. ಈ ಘಟನೆಯ ಕುರಿತು ತನಿಖೆಯನ್ನು ಆರಂಭಿಸಿರುವ ಪೊಲೀಸರು ಈ ಘಟನೆಯ ಕುರಿತಾಗಿರುವ ಸಾಕ್ಷಿಗಳು ಮತ್ತು ಸೆಕ್ಯೂರಿಟಿ ಗಾರ್ಡ್‌ರನ್ನು ಪ್ರಶ್ನಿಸಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಸ್ಥಳವನ್ನು ಸುಲಭವಾಗಿ ತಲುಪುವಂತೆ ಮಾಡುತ್ತಿದೆ ಮೆಟ್ರೋ...!