Publish Date: Sun, 28 Jan 2018 (15:32 IST)
Updated Date: Sun, 28 Jan 2018 (15:42 IST)
ಬೆಂಗಳೂರು: ಬಾಲಿವುಡ್ ನ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ಶ್ರೀಲಂಕಾದ ಹುಡುಗಿಯೊಬ್ಬಳನ್ನು ರಾಜ್ಯಕ್ಕೆ ಕರೆಸಿಕೊಂಡು ಅತ್ಯಾಚಾರ ಮಾಡಿದ ಘಟನೆಯೊಂದು ನಡೆದಿದೆ.
ಫೇಸ್‌ಬುಕ್ ಮೂಲಕ ಪರಿಚಯವಾದ ಶ್ರೀಲಂಕಾದ ಬಾಲಕಿಯೊಬ್ಬಳನ್ನು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ನಂತರ ಅವಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರವೆಸಗಿದ ಹಾವೇರಿಯ ಸತೀಶ್‌ಪಾಟೀಲ್ (35) ಈತನ ಸಹಚರರಾದ ರಮೇಶ್ (40) ಹಾಗೂ ಶಂಭು (20) ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಸತೀಶ್ ತನ್ನ ಫೇಸ್‌ಬುಕ್ ಮೂಲಕ ಪರಿಚಯವಾದ ಶ್ರೀಲಂಕಾದ 14 ವರ್ಷದ ಬಾಲಕಿಗೆ, ನೀನು ನೋಡಲು ತುಂಬ ಸುಂದರವಾಗಿದ್ದು, ಹಿಂದಿ ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಇಂತಹ ಕೃತ್ಯ ಮಾಡಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ