Publish Date: Tue, 23 Jan 2018 (10:58 IST)
Updated Date: Tue, 23 Jan 2018 (11:03 IST)
ಗದಗ : ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಸಂಸದ ಪ್ರತಾಪ್ ಸಿಂಹ ಅವರು ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ ಲೇಖನ ಬರೆಯುವ ಅವಕಾಶ ಸಿಕ್ಕಿದೆ ಎಂದು ಲೋಕಸಭಾ ಸದಸ್ಯರಾದ ಮಾತ್ರಕ್ಕೆ ನೆಹರೂ ಅವರನ್ನು ಹೀಯಾಳಿಸಿ ಬರೆಯುತ್ತಾರೆ. ದನಗಳಿಗೆ ಭಾಷೆ ಇಲ್ಲ, ಜನರಿಗೆ ಭಾಷೆ ಇದೆ. ಭಾಷೆಯ ಪ್ರಯೋಗ ಯೋಗ್ಯ ರೀತಿಯಲ್ಲಿ ಮಾಡದೇ ಹೋದರೆ ಜನರಿಗೆ ದನಗಳಿಗೆ ವ್ಯತ್ಯಾಸ ಇರುವುದಿಲ್ಲ ಎಂದು ಪ್ರತಾಪ್ ಸಿಂಹ ಅವರ ವಿರುದ್ಧ ಕಿಡಿಕಾರಿದ್ದಾರೆ.
ಮಾತು ಮುಂದುವರಿಸಿದ ಅವರು ‘ಈ ದೇಶದಲ್ಲಿ ಸಂಹಿತೆಯೂ ಇರದಂತೆ ಆಗಿದೆ. ಸಂಸದರು ಸಂಸತ್ ನಲ್ಲಿ ಯಾವ ಭಾಷೆ ಬಳಸಬೇಕು, ಹೊರಗೆ ಯಾವ ಭಾಷೆ ಬಳಸಬೇಕು ಎನ್ನುವ ಸಂಯಮ ಕಳೆದುಕೊಂಡಿದ್ದಾರೆ’ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ