Select Your Language

Notifications

webdunia
webdunia
webdunia
webdunia

ಕಾರಿನಿಂದ ಹೊರಗೆಳೆದು ಗಂಡ, ಅತ್ತೆ-ಮಾವನೆದುರೇ ಮಹಿಳೆಯ ಮೇಲೆ ಅತ್ಯಾಚಾರ

ಕಾರಿನಿಂದ ಹೊರಗೆಳೆದು ಗಂಡ, ಅತ್ತೆ-ಮಾವನೆದುರೇ ಮಹಿಳೆಯ ಮೇಲೆ ಅತ್ಯಾಚಾರ
ನವದೆಹಲಿ , ಮಂಗಳವಾರ, 23 ಜನವರಿ 2018 (09:59 IST)
ನವದೆಹಲಿ: ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಕುಟುಂಬದವರ ಎದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಗುರ್ ಗಾಂವ್ ನಲ್ಲಿ ನಡೆದಿದೆ.
 

22 ವರ್ಷದ ಮಹಿಳೆಯನ್ನು ಆಕೆಯ ಗಂಡ, ಅತ್ತೆ-ಮಾವನ ಎದುರೇ ಅತ್ಯಾಚಾರ ಮಾಡಲಾಗಿದೆ. ನಾಲ್ವರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಯೊಬ್ಬರ ಮನೆಯಲ್ಲಿ ಕಾರ್ಯಕ್ರಮುಗಿಸಿ ಮೈದುನನ ಕಾರಿನಲ್ಲಿ ಕುಟುಂಬ ಸಮೇತರಾಗಿ ಬರುತ್ತಿದ್ದಾಗ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ನಿಲ್ಲಿಸಿದ್ದಲ್ಲದೆ, ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಗನ್ ತೋರಿಸಿ ಬೆದರಿಸಿ ಈ ಕೃತ್ಯವೆಸಗಿದ್ದಾರೆ.

ಮಹಿಳೆ ಮೇಲೆ ಅತ್ಯಾಚಾರವೆಸಗಿದ ದುರುಳರು ಪೊಲೀಸರಿಗೆ ತಿಳಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಮರಳಿದ್ದರು. ಆದರೆ ಸಂತ್ರಸ್ತೆಯ ಪತಿ ದುಷ್ಕರ್ಮಿಗಳ ಕಾರಿನ ನಂಬರ್ ಬರೆದಿಟ್ಟುಕೊಂಡು ಪೊಲೀಸರಿಗೆ ತಿಳಿಸಿದ್ದರಿಂದ ಸುಲಭವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇವರ ಹೆಡೆಮುರಿ ಕಟ್ಟಲೂ ಸಿದ್ಧರಂತೆ ಸಿಎಂ ಸಿದ್ದರಾಮಯ್ಯ!