Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಮಾತನಾಡುವ ಬೊಂಬೆ ಖ್ಯಾತಿಯ ಡಿಂಕು ಇಂದುಶ್ರೀಗೆ ಸನ್ಮಾನ

ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅವರಿಂದ ಮಾತನಾಡುವ ಬೊಂಬೆ ಖ್ಯಾತಿಯ ಡಿಂಕು ಇಂದುಶ್ರೀಗೆ ಸನ್ಮಾನ
ನವದೆಹಲಿ , ಸೋಮವಾರ, 22 ಜನವರಿ 2018 (06:30 IST)
ನವದೆಹಲಿ : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗೌರವಿಸಲಾಗಿದ್ದು, ಮಾತನಾಡುವ ಬೊಂಬೆ ಖ್ಯಾತಿಯ ಡಿಂಕು ಇಂದುಶ್ರೀ ಸೇರಿದಂತೆ 11 ಮಂದಿ ಸಾಧಕಿಯರನ್ನು ಸನ್ಮಾನಿಸಲಾಗಿದೆ.

 
ಮಾತನಾಡುವ ಬೊಂಬೆ ಖ್ಯಾತಿಯ ಡಿಂಕು ಇಂದುಶ್ರೀ, ಶೇ.100 ರಷ್ಟು ಅಂಧತ್ವ ಹೊಂದಿರುವ ಐ.ಎಫ್.ಎಸ್. ಅಧಿಕಾರಿ ಬೆನೊ ಝೈಫನ್, ಅಂಧ ಲೆಕ್ಕ ಪರಿಶೋಧಕಿ ರಜನಿ ಗೋಪಾಲಕೃಷ್ಣನ್ ಸೇರಿದಂತೆ ಹಲವು ಸಾಧಕಿಯರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸನ್ಮಾನಿಸಿದ್ದಾರೆ.

 
ಬೆಂಗಳೂರಿನ ಇಂದುಶ್ರೀ ಅವರು ಮಾತನಾಡುವ ಬೊಂಬೆ ಮೂಲಕ ಸಾವಿರಾರು ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ಮಾಡಿ ಪ್ರಖ್ಯಾತಿ ಹೊಂದಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಲಿ: ಸುಬ್ರಹ್ಮಣ್ಯಂ ಸ್ವಾಮಿ