Select Your Language

Notifications

webdunia
webdunia
webdunia
webdunia

ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಲಿ: ಸುಬ್ರಹ್ಮಣ್ಯಂ ಸ್ವಾಮಿ

ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಲಿ: ಸುಬ್ರಹ್ಮಣ್ಯಂ ಸ್ವಾಮಿ
ಬೆಂಗಳೂರು , ಭಾನುವಾರ, 21 ಜನವರಿ 2018 (18:06 IST)
ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ರಾಮಚಂದ್ರಪುರ ಮಠದಲ್ಲಿ ಮಾತನಾಡಿದ ಅವರು, ಗೋಹತ್ಯೆ ಮಾಡಿದವರಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಯಾಗಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಗೋಹತ್ಯೆ ನಿಷೇಧಿಸಲಾಗುವುದು ಎಂದು ತಿಳಿಸಿದ್ದಾರೆ.
 
ಹಿಂದೂಗಳಾಗಲಿ ಅಥವಾ ಮುಸ್ಲಿಮರಾಗಲಿ ಗೋಮಾಂಸ ಸೇವಿಸಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಗೋಮಾಂಸ ಸೇವಿಸುವವರು ಸಂವಿಧಾನ ವಿರೋಧಿಗಳು. ಅಂತಹವರಿಗೆ ಶಿಕ್ಷೆಯಾಗಲೇಬೇಕು ಎಂದು ಕಿಡಿಕಾರಿದ್ದಾರೆ.
 
ಕಾಂಗ್ರೆಸ್ ಸರಕಾರ ಗೋಹತ್ಯೆ ಮಾಡುವವರ ಪರವಾಗಿದೆ. ಇಂತಹ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಅಪ್ಪ, ಅಮ್ಮ ಕುರುಬರಾಗಿದ್ದರಿಂದ ನಾನು ಕುರುಬ ಜಾತಿಯವನಾಗಿದ್ದೇನೆ-ಸಿಎಂ ಸಿದ್ದರಾಮಯ್ಯ