ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಹಲ್ಲಿ ಕೂಡ ಭವಿಷ್ಯ ತಿಳಿಸುತ್ತದೆ. ಮುಂದೆ ಆಗುವುದರ ಬಗ್ಗೆ ಹಲ್ಲಿ ನಮಗೆ ಸೂಚನೆ ಕೊಡುತ್ತದೆಯಂತೆ. ಹಲ್ಲಿ ಮೈಮೇಲೆ ಬಿದ್ದರೆ ಶುಭ ಹಾಗು ಅಶುಭ ಎಂದು ಹೇಳುತ್ತಾರೆ.
ಪುರುಷನಿಗೆ ಎಡಗಡೆ ಹಾಗು ಮಹಿಳೆಯರಿಗೆ ಬಲಭಾಗದಲ್ಲಿ ಬಿದ್ದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ. ಹಾಗೆ ಪುರುಷರಿಗೆ ಬಲಭಾಗದಲ್ಲಿ , ಮಹಿಳೆಯರಿಗೆ ಎಡಭಾಗದಲ್ಲಿ ಹಲ್ಲಿ ಬಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಹಣೆಯ ಮೇಲೆ ಹಲ್ಲಿ ಬಿದ್ದರೆ ಅದರಿಂದ ಹಣ ಸಿಗುವ ಸಾಧ್ಯತೆಗಳಿರುತ್ತದೆ. ಕೂದಲಿನ ಮೇಲೆ ಬಿದ್ದರೆ ಅವರಿಗೆ ಸಾವು ಸಂಭವಿಸುವ ಸೂಚನೆಯಾಗಿದೆ. ಬಲಕಿವಿಯ ಮೇಲೆ ಬಿದ್ದರೆ ಆಭರಣ ಸಿಗುವ ಸಾಧ್ಯತೆ ಇರುತ್ತದೆ ಹಾಗೇ ಎಡ ಕಿವಿಯ ಮೇಲೆ ಬಿದ್ದರೆ ಆಯುಷ್ಯ ವೃದ್ದಿಯಾಗುತ್ತದೆ. ಮೂಗಿನ ಮೇಲೆ ಬಿದ್ದರೆ ಭಾಗ್ಯದ ಸಂಕೇತ, ಮುಖದ ಮೇಲೆ ಹಲ್ಲಿ ಬೀಳುವುದರಿಂದ ಒಳ್ಳೆ ಭೋಜನ ಸಿಗುತ್ತದೆಯಂತೆ. ಕುತ್ತಿಗೆ ಮೇಲೆ ಬಿದ್ದರೆ ಗೌರವ ಪ್ರಾಪ್ತಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ