Publish Date: Sun, 21 Jan 2018 (11:24 IST)
Updated Date: Sun, 21 Jan 2018 (11:29 IST)
ಬೆಂಗಳೂರು : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಗೆ ಎಳನೀರಿನಲ್ಲಿ ಮತ್ತು ಬರುವ ಮೆಡಿಸಿನ್ ಮಿಕ್ಸ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ದಿನೇಶ್ ಎಂಬಾತ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಈತ ಹಾಗು ಸಂತ್ರಸ್ತೆ ಎರಡುವರೆ ವರ್ಷಗಳಿಂದ ಸ್ನೇಹಿತರಾಗಿದ್ದು, ಒಂದು ದಿನ ಮುರುಡೇಶ್ವರಕ್ಕೆ ಟ್ರಿಪ್ ಗೆ ಹೋದಾಗ ಆತ ಈ ಕೃತ್ಯ ಎಸಗಿದ್ದಾನೆ. ನಂತರ ಮದುವೆಯಾಗುವುದಾಗಿ ಭರವಸೆ ಕೊಟ್ಟು ನಂತರ ಮನೆಯವರಿಗೆ ನೀನು ಇಷ್ಟವಿಲ್ಲವೆಂದು ನೆಪ ಹೇಳುತ್ತಿದ್ದಾನೆ.
ಇದಕ್ಕೆ ಸಂತ್ರಸ್ತೆ ಆಕ್ರೋಶ ವ್ಯಕ್ತಪಡಿಸಿದ್ದ ಕಾರಣ ಆಕೆಯ ಮೇಲೆ ಮತ್ತೆ ಅತ್ಯಾಚಾರವೆಸಗಿದನ್ನು ವಿಡಿಯೋ ಮಾಡಿ ಅದನ್ನು ಆಕೆಯ ಮನೆಯವರಿಗೆ ಹಾಗು ಸಾಮಾಜಿಕ ತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಆಕೆ ಎಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ