Publish Date: Sat, 20 Jan 2018 (06:13 IST)
Updated Date: Sat, 20 Jan 2018 (06:20 IST)
ಬೆಂಗಳೂರು : ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ ಬಗ್ಗೆ ಎಲ್ಲಾಕಡೆ ವಿರೋಧ ವ್ಯಕ್ತವಾಗಿದ್ದು, ಇದಕ್ಕೆ ಹಲವು ಸಿನಿಮಾ ತಾರೆಯರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಮೋಹಕ ತಾರೆ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ಕೂಡ ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಭೋಪಾಲ್ ನಲ್ಲಿ ಮಾಧ್ಯಮದವರೊಂದಿಗೆ ಸಂದರ್ಶನ ನಡೆಸುತ್ತಿದ್ದ ವೇಳೆ ಅವರು ಈ ಬಗ್ಗೆ ಮಾತನಾಡುವಾಗ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಗಳು ಉಚಿತವಾಗಿ ಸಿಗಬೇಕು. ಇದರ ಮೇಲೆ ಯಾವುದೇ ತೆರಿಗೆ ಇರಬಾರದು. ಗ್ರಾಮೀಣ ಪ್ರದೇಶಗಳಲ್ಲೂ ಇದು ಸಿಗುವಂತಿರಬೇಕು. ಮಹಿಳೆಯರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಸ್ಯಾನಿಟರಿ ಪ್ಯಾಡ್ ಗಳು ಕೇವಲ ತೆರಿಗೆ ರಹಿತವಾಗಿ ಮಾತ್ರವಲ್ಲ, ಉಚಿತವಾಗಿಯೇ ಸಿಗಬೇಕು. ಸರ್ಕಾರ ಅದರ ಮೇಲೆ ತೆರಿಗೆ ಹಾಕದೆ ಉಚಿತವಾಗಿ ಸಿಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ