Publish Date: Tue, 23 Jan 2018 (09:13 IST)
Updated Date: Tue, 23 Jan 2018 (09:15 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಕನ್ನಡ ಭಾಷಾ ಪ್ರೇಮ ಮೆರೆದಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಗೆ ಅಡ್ಡಿ ಮಾಡುವವರನ್ನು ಸುಮ್ಮನೇ ಬಿಡಲ್ಲ ಎಂದು ಸವಾಲು ಹಾಕಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಶತಮಾನೋತ್ಸವ ಭವನ ಉದ್ಘಾಟಿಸಿ ಮಾತನಾಡಿದ ಸಿಎಂ ಕನ್ನಡಕ್ಕೆ ಅಡ್ಡಿಪಡಿಸುವವರನ್ನು ಹೆಡೆ ಮುರಿ ಕಟ್ಟುವ ಶಕ್ತಿ ನಮಗಿದೆ ಎಂದು ಗುಡುಗಿದ್ದಾರೆ.
ಜನರ ಹಿತ, ನಾಡಿನ ಹಿತವೇ ನಮಗೆ ಮುಖ್ಯ. ಅದಕ್ಕೆ ಕೊಕ್ಕೆ ಹಾಕುವವರನ್ನು ಸಹಿಸುವುದಿಲ್ಲ. ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಕೂಡಾ ಜತೆಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ