Publish Date: Tue, 23 Jan 2018 (08:40 IST)
Updated Date: Tue, 23 Jan 2018 (08:42 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ನಿನ್ನೆ ರಾತ್ರಿ ಸಮೀರಾಚಾರ್ಯರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಮೂಲಕ ಫೈನಲ್ ಸ್ಪರ್ಧಿಗಳು ಯಾರೆಂದು ಬಿಗ್ ಬಾಸ್ ಘೋಷಿಸಿದೆ.
ಮೊನ್ನೆ ಶನಿವಾರ ಅನುಪಮಾ ಗೌಡರನ್ನು ಎಲಿಮಿನೇಟ್ ಮಾಡಿದ ಬಳಿಕ ಕಿಚ್ಚ ಸುದೀಪ್ ಸೋಮವಾರ ಇನ್ನೊಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ನಿನ್ನೆ ಮನೆಯೊಳಗೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಸಮೀರಾಚಾರ್ಯ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ವೀಕ್ಷಕರ ಕಡಿಮೆ ಮತ ಬಂದ ಸ್ಪರ್ಧಿಯನ್ನು ಆರಿಸಿ ಬಿಗ್ ಬಾಸ್ ಈ ಎಲಿಮಿನೇಷನ್ ನಡೆಸಿದೆ. ಇದೀಗ ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಮ್ ಕಾರ್ತಿಕ್, ದಿವಾಕರ್ ಮತ್ತು ಶ್ರುತಿ ಪ್ರಕಾಶ್ ಫೈನಲ್ ಗೇರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ