Publish Date: Fri, 19 Jan 2018 (13:27 IST)
Updated Date: Fri, 19 Jan 2018 (13:42 IST)
ಮುಂಬೈ: ನಾಂದೇಡ್‌ನಮಜಲ್‌ಗಾಂವ್‌ನಲ್ಲಿ ಕಾಮುಕ ಮೌಲ್ವಿ ಸಬೇರ್ ಫಾರೂಕಿ ಎಂಬಾತ 12 ವರ್ಷದ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಬರ್ಬರವಾಗಿ ಅತ್ಯಾಚಾರ ಎಸಗಿದ್ದಾನೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಸ್ಥಳದಿಂದ ಮೌಲ್ವಿ ಪರಾರಿಯಾಗಿದ್ದಾನೆ.
ಈ ಘಟನೆಯ ಕುರಿತಾಗಿ ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತೆಯ ತಾಯಿಗೆ ಗ್ರಾಮದ ಮೂವರು ರಾಜಕಾರಣಿಗಳಾದ ಎಐಎಐಎಂ ನ ನಾಯಕ ಇಬ್ರಿಷ್ ಭಗವಾನ್ , ಎನ್‌ಸಿಪಿ ನಾಯಕ ನಾವಾಬ್ ಪಟೇಲ್ ಮತ್ತು ಖಲೀಲ್ ಪಟೇಲ್ ಒತ್ತಡವನ್ನು ಹೇರಿದ್ದಾರೆ. ಆದರೆ ಬೆದರಿಕೆಗೆ ಹೆದರದೆ ಸಂತ್ರಸ್ತೆಯ ತಾಯಿ ಗುರುವಾರ ಇಟ್ವಾರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಒತ್ತಡ ಹೇರಿದ ಆರೋಪದಲ್ಲಿ ಪೊಲೀಸರು ಮೂವರು ರಾಜಕಾರಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅದೂ ಅಲ್ಲದೇ, ಆರೋಪಿ ಮೌಲ್ವಿ ಇನ್ನೊಬ್ಬ ಬಾಲಕಿಯ ಮೇಲೂ ದೌರ್ಜನ್ಯ ಎಸಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣವನ್ನು ಡೀಲ್ ನಲ್ಲಿ ಮುಗಿಸಲು ಮುಂದೆ ಬಂದಿರುವ ಮೌಲ್ವಿ ಸಂತ್ರಸ್ತೆಯ ತಾಯಿಯೊಂದಿಗೆ ಮಾತುಕತೆಗೆ ಆಗಮಿಸಿದ್ದಾಗ ಸ್ಥಳಿಯರು ಅವನಿಗೆ ಥಳಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ