Publish Date: Fri, 12 Jan 2018 (17:41 IST)
Updated Date: Fri, 12 Jan 2018 (17:43 IST)
ಹತ್ತು ರೂಪಾಯಿ ಹಣದ ಆಸೆ ತೋರಿಸಿ ಏಳು ವರ್ಷದ ಬಾಲಕಿಯ ಮೇಲೆ ಪೊಲೀಸ್ ಪೇದೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ನೋಯ್ಡಾದ ಬುದ್ಧನಗರದಲ್ಲಿ ಪೊಲೀಸ್ ಪೇದೆ ಸುಭಾಷ್ ಸಿಂಗ್ ಅತ್ಯಾಚಾರ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದು, ತೆರಿಗೆ ಇಲಾಖೆಯ ಬಳಿ ಕರ್ತವ್ಯ ನಿರ್ವಹಣೆಗೆ ನಿಯೋಜಿಸಿದ್ದಾಗ ಈ ಕೃತ್ಯ ಎಸಗಿದ್ದಾನೆ.
ನೋಯ್ಡಾದ ಸೂರಜ್‍ಪುರ ಬಳಿಯಿರುವ ಆರ್ಪಾಟ್ ಮೆಂಟ್‍ಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿರುಚಿಕೊಂಡಾಗ, ಸಾರ್ವಜನಿಕರು ಬಂದು ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಈ ವೇಳೆ ಪೊಲೀಸ್ ಪೇದೆ ಪರಾರಿಯಾಗಿದ್ದಾನೆ.
ಗುರುವಾರ ಬೆಳಗಿನ ಜಾವ 4ಗಂಟೆಗೆ ವಾಪಸ್ ಬಂದಿರುವುದು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.