Publish Date: Sat, 13 Jan 2018 (07:22 IST)
Updated Date: Sat, 13 Jan 2018 (07:26 IST)
ದೆಹಲಿ : ಮಕ್ಕಳ ಪಾರ್ಕ್ ನ ಗಾರ್ಡ್ ರೂಂನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 6 ಮಂದಿ ಕಾಮುಕರು ಅತ್ಯಾಚಾರವೆಸಗಿದ ಘಟನೆ ದೆಹಲಿಯ ಮಾಂಡ್ವಾಲಿಯಲ್ಲಿ ನಡೆದಿದೆ.
ದೆಹಲಿಯ ಮಾಂಡ್ವಾಲಿದ ಮಕ್ಕಳ ಪಾರ್ಕ್ ಒಂದರಲ್ಲಿ 14 ವರ್ಷದ ಬಾಲಕಿಯೊಬ್ಬಳು ಆಟವಾಡುತ್ತಿರುವಾಗ ಆಕೆಯ ಗೆಳೆತನ ಮಾಡಿದ ಹುಡುಗನೊಬ್ಬ ಅಲ್ಲೇ ಅಡ್ಡಾಡುತ್ತಿದ್ದು, ನಂತರ ಸಂಜೆಯ ಹೊತ್ತಿಗೆ ಆಕೆಯನ್ನು ಗಾರ್ಡ್ ರೂಂಗೆ ಕರೆದೊಯ್ದು ಒಬ್ಬರಾದ ಮೇಲೊಬ್ಬರು ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದಾರೆ.
ಮನೆಗೆ ಬಂದ ಬಾಲಕಿ ಮನೆಯವರ ಮುಂದೆ ಈ ವಿಷಯ ಹೇಳಿದ್ದರಿಂದ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಆ ಆರೋಪಿಗಳು ತಮ್ಮ ಹೆಸರು ಹಾಳು ಮಾಡಲು ಈ ರೀತಿಯಾಗಿ ಸುಳ್ಳು ಹೇಳಲು ಬಾಲಕಿಯನ್ನು ಪ್ರೇರೆಪಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ