Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಇಷ್ಟವಾಗುವ ಕಡಲೆಬೀಜದ ಬರ್ಫಿ

ಮಕ್ಕಳಿಗೆ ಇಷ್ಟವಾಗುವ ಕಡಲೆಬೀಜದ ಬರ್ಫಿ
ಬೆಂಗಳೂರು , ಗುರುವಾರ, 11 ಜನವರಿ 2018 (11:57 IST)
ಬೆಂಗಳೂರು: ಬಡವರ ಬಾದಾಮಿ ಎಂದೇ ಪ್ರಸಿದ್ಧವಾಗಿರುವ ಶೇಂಗಾ (ಕಡಲೇಬೀಜ) ಸಾಕಷ್ಟು ಪೌಷ್ಠಿಕಾಂಶವನ್ನು ಹೊಂದಿದೆ. ಮಕ್ಕಳಿಗೆ ಸಂಜೆ ವೇಳೆ ತಿನ್ನಲು ಇದರ ಚಿಕ್ಕಿ (ಬರ್ಫಿ) ಒಂದೊಳ್ಳೆ ತಿನಿಸಿ. ಸುಲಭವಾಗಿ ತಯಾರಾಗುವ ಈ ತಿನಿಸು ಆರೋಗ್ಯಕ್ಕೂ ಒಳ್ಳೆಯದು.


ಬೇಕಾಗುವ ಸಾಮಾಗ್ರಿ; ಕಡಲೆ ಬೀಜ -1 ಕಪ್, ಬೆಲ್ಲ -ಅರ್ಧ ಕಪ್, ತುಪ್ಪ -2 ಚಮಚ, ಏಲಕ್ಕಿ ಪುಡಿ -ಸ್ವಲ್ಪ


ಮಾಡುವ ವಿಧಾನ: ಕಡಲೆಬೀಜವನ್ನು ಹದವಾಗಿ ಹುರಿದುಕೊಂಡು, ಅದರ ಸಿಪ್ಪೆಯನ್ನು ತೆಗೆಯಿರಿ, ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಒಲೆಯ ಮೇಲೆ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಎಳೆ ಪಾಕ ಮಾಡಿಕೊಳ್ಳಿ. ಅದಕ್ಕೆ ಕಡಲೇ ಬೀಜದ ಪುಡಿ, ತುಪ್ಪ, ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಹದ ಬಿಸಿ ಇರುವಾಗಲೇ ಚಾಕುವಿಗೆ ತುಪ್ಪ ಸವರಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿ ರುಚಿಯಾದ ಮಾವಿನಕಾಯಿಯ ಚಿತ್ರಾನ್ನ