Select Your Language

Notifications

webdunia
webdunia
webdunia
webdunia

ಅವಳಿ ಮಕ್ಕಳು ಜನಿಸಲು ಕಾರಣವಾಗುವ ಅಂಶಗಳು ಏನು ಗೊತ್ತಾ…?

ಅವಳಿ ಮಕ್ಕಳು ಜನಿಸಲು ಕಾರಣವಾಗುವ ಅಂಶಗಳು ಏನು ಗೊತ್ತಾ…?
ಬೆಂಗಳೂರು , ಗುರುವಾರ, 11 ಜನವರಿ 2018 (07:25 IST)
ಬೆಂಗಳೂರು : ಕೆಲವು ಮಹಿಳೆಯರು ಅವಳಿ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಕೆಲವರಿಗೆ ಸಮಯದ  ಅಭಾವ, ಕೆಲವರಿಗೆ ಉದ್ಯೋಗದ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಅವಳಿ ಮಕ್ಕಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಈಗಿನ ಪರಿಸ್ಥಿತಿಗಳು, ಬದಲಾದ ಪ್ರವೃತ್ತಿಗಳ ಕಾರಣ ಅವಳಿ ಮಕ್ಕಳು ಹುಟ್ಟುವುದು ಬಹಳ ವಿರಳವಾಗಿದೆ. ಅವಳಿ ಮಕ್ಕಳು ಜನಿಸಲು ಹಲವು ಕಾರಣಗಳಿವೆ.

 
ಮೆನೊಪಾಸ್ ಟೈಮ್ ನಲ್ಲಿ ಒಂದರಿಂದ ಮೂರು ಅಂಡಾಣುಗಳವರೆಗೆ ಉತ್ಪತ್ತಿಯಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಕ್ಕಳನ್ನು ಪಡೆಯಲು ಪ್ಲಾನ್ ಮಾಡುವವರಿಗೆ ಅವಳಿ ಮಕ್ಕಳು ಹುಟ್ಟುವ ಸಂಭವವಿರುತ್ತದೆ. ಆದರೆ ಇದಕ್ಕಾಗಿ ಬಹಳ ಕಾಲ ಕಾಯಬೇಕಾಗುತ್ತದೆ. ಟೆಸ್ಟ್ ಟ್ಯೂಬ್ ಬೇಬಿಸ್ ವಿಧಾನದಿಂದ ಕೂಡ ಅವಳಿ ಮಕ್ಕಳನ್ನು ಪಡೆಯಬಹುದು. ಹಾಗೆ ನಿಮ್ಮ ವಂಶವೃಕ್ಷದಲ್ಲಿ ಯಾರಿಗಾದರೂ ಅವಳಿ ಮಕ್ಕಳಾಗಿದ್ದರೆ  ನಿಮಗೂ ಸಹ ಅವಳಿ ಮಕ್ಕಳಾಗುವ ಸಂಭವವಿರುತ್ತದೆ. ಆದರೆ ಅದನ್ನು ಖಚಿತವಾಗಿ ಹೇಳಲಾಗುವುದಿಲ್ಲ.

 
ಹಾಲಿನ ಉತ್ಪನ್ನಗಳನ್ನು ಅಧಿಕವಾಗಿ ಸೇವಿಸುವುದರಿಂದ ಇನ್ಸೂಲಿನ್ ಪ್ರಮಾಣ ಹೆಚ್ಚಾಗಿ ದೇಹದಲ್ಲಿ ಬೆರೆತು ಅವಳಿ ಮಕ್ಕಳು ಹುಟ್ಟಲು ಸಹಕಾರಿಯಾಗುವುದು. ಉತ್ತಮ ಪೋಷಕಾಂಶವಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಕೂಡ ಅವಳಿ ಮಕ್ಕಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ಬಿಟ್ ಫರ್ಟಿಲೈಜೆಶನ್ ನಿಂದ ಅವಳಿ ಮಕ್ಕಳು ಹುಟ್ಟುವ ಅವಕಾಶಗಳು ಬಹಳ ಹೆಚ್ಚು. ಆದರೆ ಇದು ಪ್ರಕೃತಿ ವಿರುದ್ಧವಾಗಿ ಡಾಕ್ಟರ್ ಸಹಾಯದಿಂದ ನಡೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ನ್ ಕಬಾಬ್