Select Your Language

Notifications

webdunia
webdunia
webdunia
webdunia

ನಗ್ನ ಸ್ಥಿತಿಯಲ್ಲಿ ಮಹಿಳಾ ಪಿಜಿಯೊಳಗೆ ನುಗ್ಗಿದ ಭೂಪ...!

Mad
ಮಹಿಳಾ ಪಿಜಿ ಎಂದರೆ ಅಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ. ಆದರೆ ಇಲ್ಲೊಬ್ಬ ಭೂಪ ಮಹಿಳಾ ಪಿಜಿಯೊಳಗೆ ನುಗ್ಗಿದ್ದಾನೆ. ಅದೂ ನಗ್ನ ಸ್ಥಿತಿಯಲ್ಲಿ. ಏಕಾಏಕಿಯಾಗಿ ನಗ್ನ ಸ್ಥಿತಿಯಲ್ಲಿ ನುಗ್ಗಿದ ಭೂಪನನ್ನು ಕಂಡು ಅಲ್ಲಿನ ಮಹಿಳೆಯರು ಗಾಬರಿಯಾಗಿದ್ದಾರೆ. ಕೆಲಕಾಲ ಭಯ ಭೀತಿಯನ್ನು ಭೂಪ ಮೂಡಿಸಿದ ಘಟನೆ ನಡೆದಿದೆ.

ದಾವಣಗೆರೆ ನಗರದ ಪಿಜೆ ಬಡಾವಣೆಯ ಮಹಿಳಾ ಪಿಜಿಯಲ್ಲಿ ಈ ಘಟನೆ ನಡೆದಿದೆ. ನಗ್ನಸ್ಥಿತಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಮಹಿಳಾ ಪಿಜಿಯೊಳಗೆ ನುಗ್ಗಿದ್ದಾನೆ. ಆತನನ್ನು ಕಂಡು ಮಹಿಳೆಯರು ಕಿರುಚಾಡಿದರು. ಹೀಗಾಗಿ ಸದ್ದು ಕೇಳಿದ ಸಾರ್ವಜನಿಕರು ಮಾನಸಿಕ ಅಸ್ವಸ್ಥನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈತ ಬೆತ್ತಲೆಯಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಮಾನಸಿಕ ಅಸ್ವಸ್ಥ ಎನ್ನುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಆರ್‍ಟಿಓ ಕಚೇರಿ ಬಾಗಿಲು ಮುಚ್ಚಿದ ವಾಹನ ಸವಾರರು: ಕಾರಣ ಗೊತ್ತಾ?