Publish Date: Wed, 20 Jun 2018 (12:02 IST)
Updated Date: Wed, 20 Jun 2018 (12:04 IST)
ಭೋಪಾಲ್: ದೇಶದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ಕುರಿತಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದ ಸಚಿವರೊಬ್ಬರು ಗೋವುಗಳಿಗೂ ಒಬ್ಬ ಸಚಿವ ಬೇಕು ಎಂದು ಆಗ್ರಹಿಸಿದ್ದಾರೆ!
ಸಚಿವ ಅಖಿಲೇಶ್ವರಾನಂದ ಇಂತಹದ್ದೊಂದು ಬೇಡಿಕೆಯಿಟ್ಟಿದ್ದಾರೆ. ಗೋವುಗಳ ಯೋಗ ಕ್ಷೇಮಕ್ಕೆಂದೇ ಒಬ್ಬ ಸಚಿವನನ್ನು ನೇಮಿಸುವುದರಿಂದ ಮೂಕ ಪಶುಗಳ ಗೋಳು ಕಡಿಮೆಯಾಗಬಹುದೆಂಬುದು ಸಚಿವರ ಲೆಕ್ಕಾಚಾರ.
ಗಮನಿಸಬೇಕಾದ ಅಂಶವೆಂದರೆ ಅಖಿಲೇಶ್ವರಾನಂದ ಗೋ ರಕ್ಷಣಾ ಸಮಿತಿಯ ಮುಖ್ಯಸ್ಥರಾಗಿದ್ದರು. ಕಳೆದ ವಾರವಷ್ಟೇ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಪದೋನ್ನತಿ ನೀಡಲಾಗಿತ್ತು. ಸಚಿವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.