Publish Date: Sun, 01 Jul 2018 (20:23 IST)
Updated Date: Sun, 01 Jul 2018 (20:27 IST)
ಜಾತಿ ಆಧಾರಿತ ಅಥವಾ ಸಮುದಾಯ ಆಧಾರಿತ ರಾಜಕಾರಣದಿಂದ ರಾಜ್ಯ ಸರಕಾರ ನಡೆಯೋದಿಲ್ಲ. ಸರಕಾರ ಜಾತಿ ಆಧಾರಿತವಾಗಿ ಎಂದಿಗೂ ನಡೆದುಕೊಳ್ಳುವುದಿಲ್ಲ. ಹೀಗಂತ ಸಚಿವರೊಬ್ಬರು ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿರುವ ಸಚಿವ ಡಿ.ಸಿ.ತಮ್ಮಣ್ಣ, ರಾಜ್ಯ ಸರಕಾರ ಐದು ವರ್ಷಗಳ ಅವಧಿ ಪೂರೈಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ. ಕುರುಬ ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರಕಾರದಲ್ಲೂ ಆರೋಪ ಈ ಬಗ್ಗೆ ಇತ್ತು. ಅದೆಲ್ಲ ಸಾಮಾನ್ಯ ವಿಷಯ. ಆದರೆ ಕೇವಲ ಜಾತಿ ರಾಜಕಾರಣದಿಂದ ಸರಕಾರ ನಡೆಯೋದಿಲ್ಲ ಎಂದರು.
ನಮ್ಮಲ್ಲಿ ಯಾವುದೇ ರೀತಿಯ ಅಸ್ಥಿರತೆ ಇಲ್ಲ. ಅದೆಲ್ಲ ಊಹಾಪೋಹ ಎಂದು ಹೇಳಿದ್ದಾರೆ.