Publish Date: Sun, 01 Jul 2018 (19:33 IST)
Updated Date: Sun, 01 Jul 2018 (19:41 IST)
ಸಮ್ಮೀಶ್ರ ಸರ್ಕಾರದ ಸಚಿವ ಸ್ಥಾನದ ಅಕಾಂಕ್ಷಿಗಳ ರಗಳೆ ಇನ್ನೂ ಮುಗಿದಿಲ್ಲ. ಇದೀಗ ಶಾಸಕರೇ ಅಲ್ಲದೇ ಸಂಸದರು ಕೂಡ ಅಖಾಡಕ್ಕೆ ದುಮುಕಿದ್ದಾರೆ. ಸಂಸದ ಡಿ.ಕೆ.ಸುರೇಶ್ ರವರು ಮಾಜಿ ಸಚಿವ ಹಾಗೂ ರೆಡ್ಡಿ ಸಮೂದಾಯದ ಪ್ರಭಾವಿ ಮುಖಂಡ ರಾಮಲಿಂಗಾರೆಡ್ಡಿ ಪರ ಬ್ಯಾಟ್ ಬೀಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಅಯ್ಕೆಯಾದ ಶಿವಣ್ಣನವರು ಏರ್ಪಡಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ, ರಾಮಲಿಂಗಾರೆಡ್ಡಿರವರು ಸೌಮ್ಯ ಸ್ವಭಾವದವರು. ಅವರಿಂದಲೇ ಬೆಂಗಳೂರಿನಲ್ಲಿ 15 ಶಾಸಕರು ಗೆಲ್ಲಲು ಸಾದ್ಯವಾಯಿತ್ತೇಂದು ತಿಳಿಸುತ್ತಾ, ರಾಮಲಿಂಗಾರೆಡ್ಡಿರವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆಂದರು.
ಸಚಿವ ಸ್ಥಾನ ಕೇಳಲು ಮೃದು ಧೋರಣೆ ಸಾಲದೆಂದು ತಿಳಿಸಿದರು. ಹಾಗೆಯೆ ಇದೇ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿರವರು, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸುತ್ತಾ ಇನ್ನೂ ನಾವು ಸಚಿವ ಸ್ಥಾನದ ರೇಸ್ ನಲ್ಲಿದ್ದೇವೆ. ಯಾರ ಮನೆಯ ಬಳಿಯು ಹೋಗಿ ಸಚಿವ ಸ್ಥಾನ ನೀಡುವಂತೆ ಕೇಳುವುದಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿದರು.