Select Your Language

Notifications

webdunia
webdunia
webdunia
webdunia

ತುಮಕೂರಿನಲ್ಲಿ ಮುಂದುವರಿದ ಚುನಾವಣೆ ಘರ್ಷಣೆ

Election Class
ಮಳೆ ನಿಂತರೂ ಮಳೆ ಹನಿ ಬೇಗ ನಿಲ್ಲುವುದಿಲ್ಲ ಎನ್ನುವ ಹಾಗೆ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಮುಗಿದರೂ ಚುನಾವಣೋತ್ತರ ಘರ್ಷಣೆಗಳು ಅಲ್ಲಲ್ಲಿ ಮರುಕಳಿಸುತ್ತಲೇ ಇವೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಚುನಾವಣಾ ರಾಜಕೀಯ ದ್ವೇಷ ಈಗಲೂ ಬೂದಿಮುಚ್ಚಿದ ಕೆಂಡದಂತಿದೆ. ಈ ದ್ವೇಷಕ್ಕೆ ಬೋರ್ ವೆಲ್, ಕೇಬಲ್ ನಾಶಪಡಿಸಲಾಗಿದೆ. ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಕೆ.ಎಸ್.ರೆಡ್ಡಿ ಎಂಬುವರ ಜಮೀನಿನಲ್ಲಿ ದುರುಳರು ಅಟ್ಟಹಾಸ ಮೆರೆದಿದ್ದಾರೆ. ಜಮೀನಿನಲ್ಲಿರುವ ದಾಳಿಂಬೆ, ಶ್ರೀಗಂಧ ಸಸಿಗಳೂ ಕೂಡ ನಾಶವಾಗಿವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪರವಾಗಿ ರೈತ ಕೆ.ಎಸ್.ರೆಡ್ಡಿ ಕೆಲಸ ಮಾಡಿದ್ದರು.

ನಾಗಲಮಡಿಕೆ ಗ್ರಾಮದ ಸುತ್ತ ಈ ರೈತ ಪ್ರಭಾವ ಹೊಂದಿದ್ದರು. ಹೀಗಾಗಿ ರಾಜಕೀಯ ದ್ವೇಷದ ಕಾರಣ ಇವರ ಜಮೀನಿನಲ್ಲಿರುವ ಬೋರ್ ವೆಲ್ ನಾಶವಾಗಿದೆ. ಈ ಕುರಿತು ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಂತರಾಜ್ಯ ಎಟಿಎಂ ಕಳ್ಳನ ಬಂಧನ