Select Your Language

Notifications

webdunia
webdunia
webdunia
Thursday, 10 April 2025
webdunia

ಹುಡುಗಿಯರನ್ನು ಇಂಪ್ರೆಸ್ ಮಾಡಲು ಸಂಜಯ್ ದತ್ ಮಾಡುತ್ತಿದ್ದ ಪ್ಲ್ಯಾನ್ ಕೇಳಿದ್ರೆ ಶಾಕ್ ಆಗ್ತೀರಿ!

ಮುಂಬೈ
ಮುಂಬೈ , ಮಂಗಳವಾರ, 26 ಜೂನ್ 2018 (19:27 IST)
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಕತೆಯಾಧಾರಿತ ‘ಸಂಜು’ ಚಿತ್ರದ ಟ್ರೇಲರ್ ನಲ್ಲಿ ನೀನು ಎಷ್ಟು ಜನ ಯುವತಿಯರೊಂದಿಗೆ ಕಾಲ ಕಳೆದಿದ್ದೀಯಾ ಎಂಬ ಪ್ರಶ್ನೆಗೆ ಸಂಜಯ್ ದತ್ ಪಾತ್ರದಲ್ಲಿ ನಟಿಸಿದ್ದ ನಟ ರಣಬೀರ್ ಕಪೂರ್ ಅವರು ಹೇಳಿದ ಉತ್ತರ ಒಂದು ಕ್ಷಣ ಎಲ್ಲರನೂ ದಿಗ್ಭ್ರಮೆಗೊಳಿಸುತ್ತದೆ.


ಹೌದು. ಈ ಪ್ರಶ್ನೆಗೆ ನಟ ರಣಬೀರ್ ಕಪೂರ್ ಅವರು 'ನಾನು 308 ಮಹಿಳೆಯರ ಜತೆ ಮಲಗಿದ್ದೇನೆ' ಎಂದು ಹೇಳಿದ್ದಾರೆ. ಇದು ಕಟ್ಟುಕತೆಯೆಲ್ಲಾ ಸ್ವತಃ ಸಂಜಯ್ ದತ್ ಅವರೇ ಈ ಬಗ್ಗೆಯೂ ತಮ್ಮ ಜೀವನಕತೆಯಲ್ಲಿ ಹೇಳಿಕೊಂಡಿದ್ದಾರಂತೆ. ಇಷ್ಟೊಂದು ಮಂದಿಯನ್ನು ಸಂಜಯ್ ದತ್  ಅವರು ಹೇಗೆ ಇಂಪ್ರೆಸ್ ಮಾಡಿದ್ರು ಎಂಬ ಕುತೂಹಲ ಹಲವರಲ್ಲಿರಬಹುದು. ಆ ಕತೆ ಕೂಡ ರೋಚಕವಾಗಿದೆ. ಯಾಕೆಂದರೆ ಪರಿಚಯವಾದ ಪ್ರತಿಯೊಂದು ಹುಡುಗಿಯರನ್ನು ಸಂಜಯ್ ದತ್ ತನ್ನ ತಾಯಿಯ ಸಮಾಧಿ ಬಳಿ ಕರೆತರುತ್ತಿದ್ದರಂತೆ. ಅಷ್ಟೇ ಅಲ್ಲದೆ ನನ್ನತಾಯಿಗೆ ನಿನ್ನ ತೋರಿಸಬೇಕು ಅನಿಸಿತು ಹೀಗಾಗಿ ಕರೆತಂದೆ ಎನ್ನುತ್ತಿದ್ದರಂತೆ. ಇದರಿಂದ ಸಹಜವಾಗಿಯೇ ಯುವತಿಯರ ಮನಸ್ಸು ಭಾವನಾತ್ಮಕವಾಗಿ ಬದಲಾಗುತ್ತಿತ್ತಂತೆ.

ಹೀಗಾಗಿ ಸಂಜಯ್ ದತ್ ಅವರ ಮನಸ್ಸಿನ ಭಾವನೆಯನ್ನು ಎಲ್ಲರೂ ಬೇರೆಯದ್ದೇ ರೀತಿಯಲ್ಲಿ ಯೋಚಿಸಿಕೊಂಡು ಸಂಜಯ್ ಗೆ ಹತ್ತಿರವಾಗುತ್ತಿದ್ದರಂತೆ. ಅಷ್ಟೇ ಅಲ್ಲದೆ ಯಾವುದಾದರೂ ಹುಡುಗಿ ಸಂಜಯ್ ದತ್ ಅವರಿಗೆ ಕೈಕೊಟ್ಟರೆ ಕೆಲವೊಮ್ಮೆ ಪ್ರತಿಕಾರವನ್ನು ತೀರಿಸಿಕೊಳ್ಳುತ್ತಿದ್ದರಂತೆ. ಈ ಬಗ್ಗೆ ಸಂಜು ಚಿತ್ರದ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಇತ್ತೀಚೆಗೆ ನಡೆಸಿದ ಸಂದರ್ಶನವೊಂದರಲ್ಲಿ ಸಂಜಯ್‌ರ ಕೃಷ್ಣಲೀಲೆಯನ್ನು ಬಿಚ್ಚಿಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜೊಲ್ ಪ್ರಕಾರ ಈ ಎರಡು ಕೆಲಸ ಮಾಡಿದರೆ ನಾವು ನೆಮ್ಮದಿಯಿಂದ ಇರಬಹುದಂತೆ